23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತೆ ಒತ್ತಾಯಿಸಿ ಪ್ರತಾಪ್ ಸಿಂಹ ನಾಯಕ್‌ ರಿಂದ ಸಚಿವ ಭೈರತಿ ಸುರೇಶ್ ರವರಿಗೆ ಮನವಿ

ಬೆಳ್ತಂಗಡಿ : ಬೆಳ್ತಂಗಡಿ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತೆ ಒತ್ತಾಯಿಸಿ ಎಂ ಎಲ್ ಸಿ
ಪ್ರತಾಪ್ ಸಿಂಹ ನಾಯಕ್‌ ಸಚಿವ ಭೈರತಿ ಸುರೇಶ್ ರವರಿಗೆ ಮನವಿ ಮಾಡಿದ್ದಾರೆ.

‘ಸುದ್ದಿ ಉದಯ ಪತ್ರಿಕೆ’ಯಲ್ಲಿ ಈ ಬಗ್ಗೆ ಬಂದ ವರದಿಯನ್ನು ಗಮನಿಸಿ ಈ ಪತ್ರವನ್ನು ಬರೆದಿರುವ ಅವರು,
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ವಾರ್ಡ್ಗಳಿಗೆ ನೀರು ಪೂರೈಕೆಗಾಗಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ರೂ. 13 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು 5 ವರ್ಷಗಳೇ ಕಳೆದಿದ್ದರೂ, ಇದುವೆಗೂ ನಾಗರೀಕರಿಗೆ ಒಂದು ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಅನುಷ್ಠಾನಗೊಳಿಸಿರುವ ರೂ.13 ಕೋಟಿ ವೆಚ್ಚದ ಕಾಮಗಾರಿ ಇಂದಿಗೂ ಸಂಪೂರ್ಣವಾಗಿ ನಿಷ್ಟ್ರಯೋಜಕವಾಗಿದೆ.

ಸುಮಾರು 13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಯೋಜನೆ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದ ಇಂದಿಗೂ ಸಂಪೂರ್ಣ ನಿಷ್ಟ್ರಯೋಜಕವಾಗಿಯೇ ಉಳಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ, ನದಿಗಳಲ್ಲಿ ನೀರಿನ ಹರಿವು ಈಗಾಗಲೇ ನಿಂತಿದೆ. ನಗರದಲ್ಲಿ ನೀರಿನ ಸಮಸ್ಯೆ ಈಗಾಗಲೇ ವ್ಯಾಪಕವಾಗಿ ಕಾಡತೊಡಗಿದೆ.

ಆದುದರಿಂದ ನಗರದ ಜನರ ಅನುಕೂಲಕ್ಕಾಗಿ ಮಾಡಿದ ಕೋಟ್ಯಾಂತರ ವೆಚ್ಚದ ಕುಡಿಯುವ ನೀರಿನ ಈ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತಾಗಲು ತತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ನಗರಾಭಿವೃದ್ಧಿ ನಗರ ಯೋಜನೆ ಸಚಿವ ಭೈರತಿ ಸುರೇಶ್ ರವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ.

Related posts

ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹುಟ್ಟೂರಿನತ್ತ ವಸಂತ ಬಂಗೇರ ಮೃತದೇಹ; ನಾಳೆ ಬೆಳಗ್ಗೆ 4 ಗಂಟೆಗೆ ಬೆಳ್ತಂಗಡಿ ನಿವಾಸಕ್ಕೆ ಪಾರ್ಥೀವ ಶರೀರ ಆಗಮನ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ಜ.14: ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಯಕ್ಷೋತ್ಸವ : ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಮತದಾನ

Suddi Udaya

ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ

Suddi Udaya

ಅಳದಂಗಡಿಯಲ್ಲಿ “ಅಶ್ವಿ” ಅಲಂಕಾರ ಮಳಿಗೆ ಶುಭಾರಂಭ

Suddi Udaya
error: Content is protected !!