September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಶ್ರೀ ಕ್ಷೇ.ಧ.ಶೌ.ವಿ.ನಿ. ಘಟಕ ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಮತ್ತು ಕಾಳ್ಗಿಚ್ಚು ಮುಂಜಾಗೃತಿ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ

ಶಿಶಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ ಶಿಶಿಲ ಮತ್ತು ಕರ್ನಾಟಕ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಜಂಟಿ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಮತ್ತು ಕಾಳ್ಗಿಚ್ಚು ಮುಂಜಾಗೃತಿ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ ಮಾ.6ರಂದು ನಡೆಸಲಾಯಿತು.

ಉಪ್ಪಿನಂಗಡಿ ಅರಣ್ಯ ವಲಯದ ಕಾಡಂಚಿನ ಶಾಲೆಗಳಾದ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆ ಅರಸಿನಮಕ್ಕಿ, ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿ,ಶಿಶಿಲ ಶಾಲೆ ,ಕೊಳಕ್ಕೆಬೈಲು ಶಾಲಾ ವಿದ್ಯಾರ್ಥಿಗಳಿಗೆ ಪರಿಸರದೊಂದಿಗೆ ವನ್ಯಜೀವಿ ಸಂರಕ್ಷಣೆ ಮತ್ತು ಕಾಡ್ಗಿಚ್ಚು ಸಂಭವಿಸದಂತೆ ಅನುಸರಿಸುವ ಮುಂಜಾಗೃತಾ ಕ್ರಮಗಳು ಮತ್ತು ಕಾಡ್ಗಿಚ್ಚು ಕಂಡುಬಂದಲ್ಲಿ ಯಾವ ರೀತಿಯಾಗಿ ಅರಣ್ಯ ಇಲಾಖೆಯ ಸಂಪರ್ಕದೊಂದಿಗೆ ಸೇರಿಕೊಂಡು ಅದನ್ನು ಹತೋಟಿಗೆ ತರಬಹುದು ಎಂಬುದರ ಬಗ್ಗೆ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯ ಸುರೇಶ್ ಶಿಬಾಜೆ ವಿವರಿಸಿದರು.

ಅರಣ್ಯಾಧಿಕಾರಿ ನಾಗಲಿಂಗ ಮತ್ತು ಸಚಿನ್ ಇವರು ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಉಂಟಾಗುವ ನೀರಿನ ಕೊರತೆಗೆ ನಾಗರಿಕ ಸಮಾಜದಿಂದ ಯಾವ ರೀತಿಯ ಸಹಾಯ ಮಾಡಬಹುದೆಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಜಾಗೃತಿಗಾಗಿ ಕರಪತ್ರಗಳನ್ನು ಹಂಚಲಾಯಿತು. ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ, ಘಟಕ ಪ್ರತಿನಿಧಿ ಆನಂದ ನಾಯ್ಕ,ರಮೇಶ್ ಭೈರಕಟ್ಟ,ಅವಿನಾಶ್ ಭಿಡೆ,ಶೀನಪ್ಪ ಶಿಶಿಲ ಅಭಿಯಾನದಲ್ಲಿ ಸಹಕಾರ ನೀಡಿದರು. ಶಿಶಿಲ ಶಾಲೆಯಲ್ಲಿ ಅಭಿಯಾನದ ಸಮಯದಲ್ಲಿ ಕಳೆದ ವರ್ಷ ಕಾಡ್ಗಿಚ್ಚು ಉಂಟಾದ ಸಮಯದಲ್ಲಿ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿದ ಮನೀಷ್ ಎಂಬ ಬಾಲಕನನ್ನು ಅರಣ್ಯಾಧಿಕಾರಿ ಸಚಿನ್ ಶ್ಲಾಘಿಸಿದರು.

Related posts

ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಪಾರೆಂಕಿ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಕಕ್ಕಿಂಜೆ ಮಾಂಡೋವಿ ಮೋಟಾರ್ಸ್‌ನಲ್ಲಿ ನ್ಯೂ ಬ್ರೆಝಾ ಕಾರು ಬಿಡುಗಡೆ

Suddi Udaya

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಒತ್ತಾಯ: ಸೆ.3: ಬೆಳ್ತಂಗಡಿಯಲ್ಲಿ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ

Suddi Udaya

ಸುರ್ಯ ಸ.ಕಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಬ್ಯಾಗ್ ವಿತರಣೆ

Suddi Udaya
error: Content is protected !!