23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವೈಭವ: ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ವಿವಿಧ ಸಮಿತಿಗಳ ಜೊತೆ ಸಮಾಲೋಚನಾ ಸಭೆ


ವೇಣೂರು: ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಫೆ.22 ರಿಂದ ಮಾರ್ಚ್ ಒಂದರ ವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಫೆ.17ರಂದು ವೇಣೂರಿನ ಯಾತ್ರಿನಿವಾಸದಲ್ಲಿ ವಿವಿಧ ಸಮಿತಿಗಳ ಜೊತೆ ಸಮಾಲೋಚನೆ ನಡೆಸಿ ಸಕಾಲಿಕ ಮಾರ್ಗದರ್ಶನ ನೀಡಿದರು.
ಸರ್ವರ ಸಹಕಾರದೊಂದಿಗೆ ಮಹಾಮಸ್ತಕಾಭಿಷೇಕ ಯಶಶ್ವಿಯಾಗಿ  ಧರ್ಮಪ್ರಭಾವನೆಯಾಗಲಿ ಎಂದು ಅವರು ಹಾರೈಸಿದರು.


ಅಭಿಷೇಕ ಸಮಿತಿ, ಪೂಜಾಸಮಿತಿ, ಆಹಾರಸಮಿತಿ, ಮಹಿಳಾಸಮಿತಿ ಮೊದಲಾದ ವಿವಿಧ ಸಮಿತಿಗಳ ಜೊತೆ ಸಮಾಲೋಚನೆ ನಡೆಸಿದ ಪೂಜ್ಯ ಸ್ವಾಮೀಜಿಯವರು ಸೂಕ್ತ ಮಾರ್ಗದರ್ಶನ ನೀಡಿದರು.
ಮಸ್ತಕಾಭಿಷೇಕಕ್ಕೆ ಬೇಕಾದ ಪೂಜ್ಯದ್ರವ್ಯಗಳನ್ನು ಉಚಿತ ಕೊಡುಗೆಯಾಗಿ ನೀಡಿದ ತುಮಕೂರಿನ ಉದ್ಯಮ ರಾಜೇಂದ್ರ ಕುಮಾರ್ ಅವರನ್ನು ಸ್ವಾಮೀಜಿಯವರು ಗೌರವಿಸಿ ಆಶೀರ್ವದಿಸಿದರು.


ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು.
ಸರ್ಕಾರದ ವತಿಯಿಂದ ಮಾರ್ಗದರ್ಶಿಅಧಿಕಾರಿ ಮೂಡಬಿದ್ರೆಯ ಮಾಣಿಕ್ಯ, ಎಂ. ಮಸ್ತಕಾಭಿಷೇಕ ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ, ವಿಕಾಸ್ ಜೈನ್ ಪೆರಿಂಜೆ ಉಪಸ್ಥಿತರಿದ್ದರು.
ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.

Related posts

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳಿಂದ ಘಂಟಾ ಗೋಪುರ ಸಮರ್ಪಣೆ

Suddi Udaya

ವಲಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸ.ಪ್ರೌ.ಶಾಲೆ ಗೇರುಕಟ್ಟೆ ಪ್ರಥಮ

Suddi Udaya

ನಾರಾವಿ ಶ್ರೀ ಕೃಷ್ಣ ಹೋಟೆಲ್ ನ ಮಾಲಕ ಚಂದ್ರಕಾಂತ ಹೆಗ್ಡೆ ನಿಧನ

Suddi Udaya

ಮಾ.1 ರಿಂದ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮಾ.21 ರಿಂದ ಎಸೆಸೆಲ್ಸಿ ಪರೀಕ್ಷೆ; ಅಂತಿಮ ವೇಳಾಪಟ್ಟಿ ಪ್ರಕಟ

Suddi Udaya

ಡಾ. ಹೆಗ್ಗಡೆಯವರ ಬಗ್ಗೆ ಅಪಪ್ರಚಾರಕ್ಕೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳಿಂದ ಖಂಡನೆ; ಹೆಗ್ಗಡೆಯವರ ಮತ್ತು ಅವರ ಕುಟುಂಬವರ್ಗದವರ ಬಗ್ಗೆಅವಮಾನಕರ ಮಾತುಗಳನ್ನಾಡುವವರ ಅನಪೇಕ್ಷಿತ‌ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ; ಉಜಿರೆಯ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಎಸ್‌ಡಿಎಂ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಪತ್ರಿಕಾ ಹೇಳಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆ

Suddi Udaya
error: Content is protected !!