ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಫೆ.17 ರಿಂದ ಪ್ರಾರಂಭಗೊಂಡು ಫೆ.26 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಫೆ.18ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅರಿಕೆಗುಡ್ಡೆ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ ಅಧ್ಯಕ್ಷತೆ ವಹಿಸಿದರು. ಪುತ್ತೂರು ಧಾರ್ಮಿಕ ನೇತಾರರು ಅರುಣ್ ಕುಮಾರ್ ಪುತ್ತಿಲ ಧರ್ಮ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಕೊಕ್ಕಡ ವೈದ್ಯನಾಥೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಶಿಬಾಜೆ ದುರ್ಗಾಪರಮೇಶ್ವರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ದರ್ಭೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ ಮೊಕ್ತೇಸರರು ಉದಯ ಕುಮಾರ್ ಅಭ್ಯಂಕರ್, ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಮಂಜುನಾಥ ಗೌಡ, ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಶರತ್ ಎ.ಆರ್ ಅಮ್ಮಾಜೆ, ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರರು ಎಂ.ಪಿ. ರಾಜಗೋಪಾಲ್, ಮೈಪಾಳ ಮೂಕಾಂಬಿಕಾಗಿರಿ ಕ್ಷೇತ್ರ ಅಧ್ಯಕ್ಷ ಮಂಜುನಾಥ ಶೆಟ್ಟಿ, ಅರಸಿನಮಕ್ಕಿ ತಾ.ಪಂ. ಮಾಜಿ ಸದಸ್ಯ ಶ್ರೀಮತಿ ಮಂಜುಳಾ ಆರ್. ಕಾರಂತ್ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.
ಶುಭಲತಾ, ಯೋಗಿತಾ, ಪ್ರಾರ್ಥನಾ ಪ್ರಾರ್ಥಿಸಿ, ತ್ಯಾಂಪಣ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿ ಪ್ರಾಸ್ತವಿಸಿದರು. ಶ್ರೀಮತಿ ನೀತಾ ರಾಧೇಶ್ ಧನ್ಯವಾದವಿತ್ತರು.
ರಾತ್ರಿ ಅರಸಿನಮಕ್ಕಿ, ನಾವಳೆ, ಕುಂಟಾಲಪಳಿಕೆ, ಹೊಸ್ತೋಟ ಅಂಗನವಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜರುಗಿತು.