ಕೊಯ್ಯೂರು ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆ.13 ರಂದು ಫೆ.15 ರ ತನಕ ವಿವಿಧ ಸಾಂಸ್ಕೃತಿಕ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ಜರಗಿತು.


ಫೆ. 13 ರಂದು ಗೊನೆ ಮೂರ್ತ,ಪಡಿಯಕ್ಕಿ ವಿತರಣೆ, ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಮಹಾ ಪೂಜೆ,ಫೆ‌.14 ರಂದು ಕಲಶ ಮಹಾ ಪೂಜೆ,ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನೆ,ಮಹಾಪೂಜೆ, ಬಲಿ,ಕವಾಟ ಬಂಧನ,ಫೆ.15 ರಂದು ಕೊಯ್ಯೂರು ಉಣಿಲೆ ಗುತ್ತಿನಿಂದ ದೈವಗಳ ಭಂಡಾರ ಆಗಮನ, ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ,ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ಕೊಯ್ಯೂರು ನಾದ ನಾಟ್ಯಾಲ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.ರಾತ್ರಿ ಅನ್ನದಾನದ ಸೇವಾರ್ಥಿ ಕೊಯ್ಯೂರು ಕಡಮ್ಮಾಜೆ ಶ್ರೀಮತಿ ಹೇಮಾವತಿ ಮತ್ತು ಉಮೇಶ್ ಗೌಡ ಮನೆಯವರಿಂದ ನಡೆಯಿತು.


ರಾತ್ರಿ ಕ್ಷೇತ್ರದ ದೈವಗಳಿಗೆ ಮತ್ತು ಉಳ್ಳಾಲ್ತಿ ದೈವದ ನೇಮೋತ್ಸವ ಮತ್ತು ಮಹಾ ಪೂಜೆ ಜರುಗಿತು. ಫೆ.16 ರಂದು ಸಂಪ್ರೋಕ್ಷಣೆ ಮಹಾ ಪೂಜೆಯೊಂದಿಗೆ ಸಮಾಪನಗೊಂಡಿದೆ.
ವರ್ಷಾವಧಿ ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಚಂಡಭಾನು ಪಾಂಬೇಲು,ಅಧ್ಯಕ್ಷ ವಸಂತ ಗೌಡ ಕಡಮ್ಮಾಜೆ, ಉಪಾಧ್ಯಕ್ಷ ವಿಜಯ ಗೌಡ ಬರೆ ಮೇಲು, ಆಡಳಿತ ಮೊಕ್ತೇಸರ ಕೆ.ಬಿ.ಹರಿಶ್ಚಂದ್ರ ಬಲ್ಲಾಳ್,ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕ ಆಶೋಕ್ ಕಮಾರ್,ಕಾರ್ಯದರ್ಶಿ ದನಜಂಯ ಆಚಾರ್ಯ ಕೊಡ್ಯೇಲು, ಜತೆ ಕಾರ್ಯದರ್ಶಿ ಪದ್ಮನಾಭ ಗೌಡ ಬೊಳೋಳಿ, ಕೋಶಾಧಿಕಾರಿ ಪೆರ್ನು ಗೌಡ ಬೆಲ್ಡೆ, ಉಪ ಕೋಶಾಧಿಕಾರಿ ಶೇಖರ ಗೌಡ ಬೊಳೊಳಿ,ಭಜನ ಮಂಡಳಿ ಸದಸ್ಯರು, ವಿವಿಧ ಸಂಘದ ಪದಾಧಿಕಾರಿಗಳು ಮತ್ತು ಭಕ್ತರು ಆಗಮಿಸಿದರು.

Leave a Comment

error: Content is protected !!