24.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದ ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಸದಸ್ಯರಿಗೆ ಗೌರವಾರ್ಪಣೆ

ಗೇರುಕಟ್ಟೆ : ಆಂಧ್ರಪ್ರದೇಶದಲ್ಲಿ ನಡೆದ ಎಸ್.ಎಸ್.ಎಫ್ ನ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ದ ಕವಾಲಿಯಲ್ಲಿ ಪ್ರಥಮ ಸ್ಥಾನ ಹಾಗೂ ಅರೇಬಿಕ್ ನಶೀದಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಜುನೈದ್ ಪರಪ್ಪು, ಅನ್ವರ್ ಸಾದಾತ್ ಪರಪ್ಪು, ಹಾಗೂ ಉರ್ದು ಹಮ್ಡ್ ಸ್ಪರ್ಧೆಯಲ್ಲಿ ಸೈಫುಲ್ಲಾ ಪರಪ್ಪು ಪ್ರಥಮ ಸ್ಥಾನ ಪಡೆದು ವಿಜೇತರಾದ ಪರಪ್ಪು ಯೂನಿಟ್ ನ ಎಸ್.ಎಸ್.ಎಫ್ ನ ಸದಸ್ಯರನ್ನು ಗೇರುಕಟ್ಟೆಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.


ಈ ಸ್ಪರ್ಧೆಯಲ್ಲಿ ದೇಶದ ಹಲವಾರು ರಾಜ್ಯಗಳು ಭಾಗವಹಿಸಿ ಕರ್ನಾಟಕ ರಾಜ್ಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತರನ್ನು ತೆರೆದ ವಾಹನದಲ್ಲಿ ಗೇರುಕಟ್ಟೆಯಿಂದ ಪರಪ್ಪು ಜಾರಿಗೆಬೈಲು ಸುಣ್ಣ ಲಡ್ಡ ಮುಳ್ಳಗುಡ್ಡೆ
ಬಟ್ಟೆಮಾರುವರೇಗೆ ವಾಹನ ಜಾಥಾ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಖತೀಬರಾದ ತಾಜುದ್ದಿನ್ ಸಖಾಫಿ, ಅಬೂಬಕ್ಕರ್ ಹಾಜಿ, ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಸ್ತಫ ಹಿಮಮಿ, ಸಂಶೀರ್ ಸಖಾಫಿ, ಇಕ್ಬಾಲ್ ಮರ್ಜೂಕಿ, ಅಬ್ದುಲ್ ಕರೀಮ್, ಬಿ.ಎಂ. ಆದಂ ಹಾಜಿ, ಎನ್.ಎನ್ ಮಹಮ್ಮದ್, ಸಿದ್ದೀಕ್ ಜಿ ಎಚ್, ಫಯಾಜ್, ರಹಿಮಾನ್ ಮಾಸ್ಟರ್, ಹಾಗೂ ಜಮಾಅತರು,ಎಸ್ಎಸ್ಎಫ್ ನ ಸದಸ್ಯರು, ಎಸ್ ವೈ ಎಸ್, ಕೆ.ಎಮ್.ಜೆ ಯ ಪದಾಧಿಕಾರಿಗಳು, ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಪ್ಪು ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು.

Related posts

ಶಿಬಾಜೆ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ: ಸಿ.ಐ.ಡಿ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶ: ಡಿಎಸ್‌ಎಸ್ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ

Suddi Udaya

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ರೇಡಿಯೋಲಜಿ ವಿಭಾಗ ಮತ್ತು ನೂತನ ಸಿ.ಟಿ. ಸ್ಕ್ಯಾನಿಂಗ್ ಪ್ರಾರಂಭೋತ್ಸವ

Suddi Udaya

ನಾಳೆ (ಎ.30) ನಾರಾವಿ ಉಪ ವಲಯಾರಣ್ಯಾಧಿಕಾರಿ ಕುಶಾಲಪ್ಪ ಗೌಡರವರಿಗೆ ಸೇವಾ ನಿವೃತ್ತಿ

Suddi Udaya

ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬಿಜೆಪಿ ಶಾಸಕರ ಹೋರಾಟ ಯಶಸ್ವಿ -ಕಳೆಂಜ ದೇವಣ್ಣ ಗೌಡರ ಮನೆ ತೆರವು ಅರಣ್ಯ ಇಲಾಖೆಯ ಪ್ರಯತ್ನ ವಿಫಲ – ಜಂಟಿ ಸರ್ವೆಗೆ ಸಮ್ಮತಿ: ಸರ್ವೆ ನಡೆಸುವವರೆಗೆ ಯಥಾ ಸ್ಥಿತಿ ಮುಂದುವರಿಕೆ

Suddi Udaya

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಮಚ್ಚಿನ ಗ್ರಾ.ಪಂ. ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya
error: Content is protected !!