38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದ ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಸದಸ್ಯರಿಗೆ ಗೌರವಾರ್ಪಣೆ

ಗೇರುಕಟ್ಟೆ : ಆಂಧ್ರಪ್ರದೇಶದಲ್ಲಿ ನಡೆದ ಎಸ್.ಎಸ್.ಎಫ್ ನ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ದ ಕವಾಲಿಯಲ್ಲಿ ಪ್ರಥಮ ಸ್ಥಾನ ಹಾಗೂ ಅರೇಬಿಕ್ ನಶೀದಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಜುನೈದ್ ಪರಪ್ಪು, ಅನ್ವರ್ ಸಾದಾತ್ ಪರಪ್ಪು, ಹಾಗೂ ಉರ್ದು ಹಮ್ಡ್ ಸ್ಪರ್ಧೆಯಲ್ಲಿ ಸೈಫುಲ್ಲಾ ಪರಪ್ಪು ಪ್ರಥಮ ಸ್ಥಾನ ಪಡೆದು ವಿಜೇತರಾದ ಪರಪ್ಪು ಯೂನಿಟ್ ನ ಎಸ್.ಎಸ್.ಎಫ್ ನ ಸದಸ್ಯರನ್ನು ಗೇರುಕಟ್ಟೆಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.


ಈ ಸ್ಪರ್ಧೆಯಲ್ಲಿ ದೇಶದ ಹಲವಾರು ರಾಜ್ಯಗಳು ಭಾಗವಹಿಸಿ ಕರ್ನಾಟಕ ರಾಜ್ಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತರನ್ನು ತೆರೆದ ವಾಹನದಲ್ಲಿ ಗೇರುಕಟ್ಟೆಯಿಂದ ಪರಪ್ಪು ಜಾರಿಗೆಬೈಲು ಸುಣ್ಣ ಲಡ್ಡ ಮುಳ್ಳಗುಡ್ಡೆ
ಬಟ್ಟೆಮಾರುವರೇಗೆ ವಾಹನ ಜಾಥಾ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಖತೀಬರಾದ ತಾಜುದ್ದಿನ್ ಸಖಾಫಿ, ಅಬೂಬಕ್ಕರ್ ಹಾಜಿ, ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಸ್ತಫ ಹಿಮಮಿ, ಸಂಶೀರ್ ಸಖಾಫಿ, ಇಕ್ಬಾಲ್ ಮರ್ಜೂಕಿ, ಅಬ್ದುಲ್ ಕರೀಮ್, ಬಿ.ಎಂ. ಆದಂ ಹಾಜಿ, ಎನ್.ಎನ್ ಮಹಮ್ಮದ್, ಸಿದ್ದೀಕ್ ಜಿ ಎಚ್, ಫಯಾಜ್, ರಹಿಮಾನ್ ಮಾಸ್ಟರ್, ಹಾಗೂ ಜಮಾಅತರು,ಎಸ್ಎಸ್ಎಫ್ ನ ಸದಸ್ಯರು, ಎಸ್ ವೈ ಎಸ್, ಕೆ.ಎಮ್.ಜೆ ಯ ಪದಾಧಿಕಾರಿಗಳು, ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಪ್ಪು ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು.

Related posts

ಉಜಿರೆ : ಎಸ್.ಡಿ.ಎಂ. ಬಿ. ವೋಕ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ಬಿ. ವೋಕ್ ಉತ್ಸವ

Suddi Udaya

ನಡ: ಪುತ್ಯೆಯಲ್ಲಿ ಗುಡ್ಡ ಜರಿದು ಮನೆಗೆ ಹಾನಿ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಅ.24: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸೌಜನ್ಯ ಹೋರಾಟದ ನೆಪದಲ್ಲಿ ತೇಜೋವಧೆ ಸರಿಯಲ್ಲ : ಭಾಸ್ಕರ್ ಧರ್ಮಸ್ಥಳ

Suddi Udaya

ಕಳೆಂಜ ಗ್ರಾ,ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆ

Suddi Udaya
error: Content is protected !!