September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಬೆಳ್ತಂಗಡಿ : ಎ.3 ರಂದು ಬಿ.ಎಸ್.ಪಿ ಯ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ : ಬಿ.ಎಸ್. ಪಿ ವತಿಯಿಂದ ದ.ಕ ಲೋಕಸಭಾ ಕ್ಷೇತ್ರಕ್ಕೆ ಕಾಂತಪ್ಪ ಅಲಂಗಾರ್ ರವರು ಎ.3ರಂದು ಬಿ.ಎಸ್.ಪಿ ಯ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸುವ ಕುರಿತು ಮಾ.30ರಂದು ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೇಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಬಿ.ಎಸ್.ಪಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ಮಾತನಾಡಿ ಬಿಜೆಪಿಯ ಆಳ್ವಿಕೆಯಲ್ಲಿ ದೇಶದ ಬಹುಜನರು ಆತಂಕದಲ್ಲಿದ್ದು ಬಿಜೆಪಿಯ ಸರಕಾರ ರಚಿಸಿದಾಗಲೆಲ್ಲ “ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ” ಎಂದು ಹೇಳುತ್ತಲೇ ಇದ್ದಾರೆ. 2000 ಇಸವಿಯಲ್ಲೂ ಸಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ ಬಿಜೆಪಿ ಪಕ್ಷದ ವಿರುದ್ಧ ಬಿ.ಎಸ್.ಪಿಯು ದೇಶವ್ಯಾಪ್ತಿ ಹೋರಾಟ ಮಾಡಿದ ಮೇಲೆ ಇಂತಹ ಹೇಳಿಕೆ ನಿಂತು ಹೋಗಿತ್ತು. ಖಾಸಗೀಕರಣಕ್ಕೆ ಮೊದಲಿಗೆ ಚಾಲನೆ ನೀಡಿದವರು ಕಾಂಗ್ರೆಸ್. ಇಂದಿಗೂ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಕ್ರಮೇಣ ರದ್ದು ಮಾಡುತ್ತಿದೆ. ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ ಎರಡು ಆಯೋಗಗಳ ವರದಿಯನ್ನು ತಿಪ್ಪಗೆಸೆದ ಅಪಕೀರ್ತಿಯು ಕಾಂಗ್ರೆಸ್‌ಗೆ ಸಲ್ಲಬೇಕಾಗಿದೆ ಎಂದರು.

ಬಿ.ಎಸ್.ಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲಾ ರಾಷ್ಟೀಯ ಪಕ್ಷಗಳು ಚುನಾವಣಾ ಬಾಂಡ್ ನ್ನು ಪಡೆಯುತ್ತವೆ ಆದರೆ ಬಹುಜನ ಸಮಾಜ ಪಾರ್ಟಿ ಯಾವುದೇ ಚುನಾವಣಾ ಬಾಂಡ್ ಗಳನ್ನು ಪಡೆಯುವುದಿಲ್ಲ ಎಂದರು

ಈ ಸಂದರ್ಭದಲ್ಲಿ ಬಿ.ಎಸ್. ಪಿ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗಾರ್ಡಡಿ, ಬಿ.ಎಸ್.ಪಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಧನ್ಯವಾದವಿತ್ತರು.

Related posts

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಶ್ರೀ ಶಾರದಾ ಪೂಜೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಎನ್.ಎ.ಬಿ.ಹೆಚ್ ರಾಷ್ಟ್ರೀಯ ಮಾನ್ಯತೆ ಘೋಷಣೆ: ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್ ಉದ್ಘಾಟನೆ, ನವೀಕೃತ ಸುಧಾರಿತ ಪ್ರಯೋಗಾಲಯ ಉದ್ಘಾಟನೆ

Suddi Udaya

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ; ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಳ್ತಂಗಡಿಯಿಂದ 1500 ಮಂದಿ ಭಾಗಿ

Suddi Udaya

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಪುಂಜಾಲಕಟ್ಟೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಸಾಧಕ 10 ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya
error: Content is protected !!