22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಗಲಿದ ಹಿರಿಯ ಸಾಹಿತಿ ಕೆ. ಟಿ. ಗಟ್ಟಿಯವರಿಗೆ ಉಜಿರೆಯಲ್ಲಿ ಶ್ರದ್ಧಾಂಜಲಿ

ಉಜಿರೆ: ಹಿರಿಯ ಸಾಹಿತಿ, ಸಂಶೋಧಕ ಕೆ.ಟಿ. ಗಟ್ಟಿಯವರ ವೈಚಾರಿಕ ಲೇಖನ, ಪ್ರವಾಸ ಕಥನ, ನಾಟಕರಂಗ, ಸಸ್ಯಶಾಸ್ತ್ರ ಅಧ್ಯಯನ, ಭಾಷಾ ತಜ್ಞ, ಕಥೆ, ಕಾದಂಬರಿ, ರೇಡಿಯೋ  ಮಕ್ಕಳ ನಾಟಕ , ಆಕಾಶವಾಣಿ ಟಿ.ವಿ.ಸಂದರ್ಶನಗಳಲ್ಲಿ  ಬರಹವೇ ಬದುಕಾಗಿತ್ತು.  ಬಹುಮುಖ ವ್ಯಕ್ತಿತ್ವದ  ನಿಸರ್ಗ ಕವಿ , ಶಿಸ್ತು, ಅಚ್ಚುಕಟ್ಟುತನ, ನಿಗರ್ವಿ, ಪ್ರಾಮಾಣಿಕತೆ , ನಿಷ್ಟುರವಾದಿ , ಸ್ನೇಹಜೀವಿ, ಯಾರಿಗೂ ತಲೆಬಾಗದೆ ತಾನಾಯಿತು ತನ್ನ ಕೆಲಸವಾಯಿತು  ಎಂಬ ಮನೋಭಾವದ  ಹೋರಾಟದ ಬದುಕು ನಡೆಸಿ ಭೌತಿಕವಾಗಿ ನಮ್ಮ ಜತೆಗಿಲ್ಲವಾದರೂ  ಅವರ ಕೃತಿಗಳು ನಮಗೆ ಸ್ಫೂರ್ತಿ ಹಾಗು ಪ್ರೇರಣೆ ಯಾಗಿವೆ. ಭಾಷೆಯ ಪ್ರಯೋಗದಲ್ಲಿ ಗಟ್ಟಿಯವರದು ಗಟ್ಟಿತನ  ಕಾಣಬಹುದು. ಯಾವುದೇ,ಯಾರದೇ ಶಿಫಾರಸಿಲ್ಲದೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅವರ  ಸಾಹಿತ್ಯ ಸೇವೆ  ಸದಾ ಸಂಸ್ಮರಣೀಯ ಎಂದು ಉಜಿರೆಯ ಎಸ್ .ಡಿ.ಎಂ. ವಸತಿ ಪ.ಪೂ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ|ಟಿ.ಕೃಷ್ಣಮೂರ್ತಿ ನುಡಿದರು.                                                                                       

ಅವರು ಫೆ 20 ರಂದು  ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ವತಿಯಿಂದ ನಡೆದ   ಅಗಲಿದ ಹಿರಿಯ ಸಾಹಿತಿ ಕೆ.ಟಿ.ಗಟ್ಟಿಯವರಿಗೆ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ  ನುಡಿನಮನ ಸಲ್ಲಿಸಿದರು. ಎಸ್ .ಡಿ.ಎಂ.ಪ.ಪೂ.ಕಾಲೇಜು ಉಪಪ್ರಾಂಶುಪಾಲ ಡಾ!ರಾಜೇಶ್ ಅವರು  ಕೆ.ಟಿ.ಗಟ್ಟಿಯವರದು ನೇರ ಮಾತುಗಾರಿಕೆ,ಪ್ರಚಾರ ಬಯಸದೆ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸೇವೆ ಯಲ್ಲಿ  ಸಮಾಜದ ಅಂಕುಡೊಂಕುಗಳನ್ನು ಸೂಕ್ಷ್ಮವಾಗಿ ಗಮನಿಸಿ ತನ್ನ ವಿಚಾರಧಾರೆಗಳನ್ನು  ಕೃತಿಗಳಲ್ಲಿ ಮೂಡಿ ಸುತ್ತಿದ್ದರು.   ನಡೆನುಡಿ ಆಚಾರ ವಿಚಾರ ವೇ ಧರ್ಮ  ಎಂದು ಪ್ರತಿಪಾದಿಸುವ  ಅವರ ಕವನಗಳಲ್ಲಿ ಬಂಡಾಯ,ಮೌಢ್ಯವನ್ನು ವಿರೋಧಿಸಿದವರು. ಜಾತಿ ವ್ಯವಸ್ಥೆ, ಧಾರ್ಮಿಕ ಸಂಪ್ರದಾಯ, ಮೂಢನಂಬಿಕೆಗಳನ್ನು  ವಿರೋಧಿಸಿದವರು  ಎಂದು ನುಡಿನಮನ ಸಲ್ಲಿಸಿದರು.                                                                     

ಅಧ್ಯಕ್ಷತೆ  ವಹಿಸಿದ್ದ  ಅ ಭಾ.ಸಾ.ಪ. ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ  ಕೆ.ಟಿ.ಗಟ್ಟಿಯವರು  ಶೀಘ್ರ ಕೋಪಿಯಾದರೂ ಸರಳ ಸರಳ ಸಜ್ಜನಿಕೆ  ಸ್ವಭಾವ ಎಲ್ಲರನ್ನೂ ಸಾಹಿತ್ಯದೆಡೆಗೆ ಪ್ರೇರೇಪಿಸಿದೆ ಎಂದು ನುಡಿದರು.

ವೇದಿಕೆಯಲ್ಲಿ ಮುಂಡಾಜೆ  ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯಚಂದ್ರ, ಅ .ಭಾ.ಸಾ.ಪ ತಾಲೂಕು ಸಮಿತಿ ಕಾರ್ಯದರ್ಶಿ ಸುಭಾಷಿಣಿ ಉಪಸ್ಥಿತರಿದ್ದರು.  ಬೆಳ್ತಂಗಡಿ ತಾಲೂಕು ಪರಿಸರದ ಸಾಹಿತ್ಯ ಅಭಿಮಾನಿಗಳು ಹಾಗು ಕೆ.ಟಿ.ಗಟ್ಟಿಯವರ ಶಿಷ್ಯವೃಂದ ಭಾಗವಹಿಸಿ ಅಗಲಿದ ಕೆ.ಟಿ.ಗಟ್ಟಿಯವರ ಭಾವಚಿತ್ರಕ್ಕೆ ಪುಷ್ಪ  ನಮನ  ಹಾಗೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.  ಹೇಮಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ ಆಯ್ಕೆ

Suddi Udaya

ಬಿಜೆಪಿ ನಾವೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಪ್ರದೀಪ್ ನಾಗಜೆ ಆಯ್ಕೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ವೇದಾವತಿ ರವರಿಗೆ ಮಂಜೂರಾತಿ ಪತ್ರ ವಿತರಣೆ

Suddi Udaya

ಬೆಳ್ತಂಗಡಿ ತಾ| ಕಚೇರಿಯ ನಿವೃತ್ತ ಉಪತಹಶೀಲ್ದಾರ್ ನಿಡ್ಲೆ ಚೆನ್ನಪ್ಪ ಗೌಡ ನಿಧನ

Suddi Udaya

ನಾರಾವಿ ಎನ್ ಎಸ್ ಎಸ್ ನಿಂದ ಸ್ವಚ್ಛತಾ ಜಾಥಾ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪಿಡಿಒ ಆಗಿ ಜಯರಾಜ್ ಅಧಿಕಾರ ಸ್ವೀಕಾರ

Suddi Udaya
error: Content is protected !!