22.7 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಎಸ್ ಡಿ ಎಮ್ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ಗಳಿಂದ ವಿಭಿನ್ನ ರೀತಿಯಲ್ಲಿ ಚಿಂತನಾ ದಿನಾಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಕಬ್ಸ್ , ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ ಗೈಡ್ ಸಂಸ್ಥಾಪಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದರು.

ಮಕ್ಕಳ ಪೋಷಕರ ಹಾಗೂ ಶಿಕ್ಷಕರ ಮಧುಮೇಹ ಹಾಗೂ ರಕ್ತದೊತ್ತಡವನ್ನು ಉಚಿತವಾಗಿ ಪರೀಕ್ಷಿಸಿದರು. ಸುಮಾರು ನೂರಕ್ಕೂ ಅಧಿಕ ಪೋಷಕರು ಇದರ ಸಹಕಾರವನ್ನು ಪಡೆದುಕೊಂಡರು. ನಂತರ ಸರ್ವಧರ್ಮ ಪ್ರಾರ್ಥನೆಯ ಮೂಲಕ ಭಾವೈಕ್ಯತೆಯನ್ನು ಸಾರಿದರು. ತಾಲೂಕು ಆರೋಗ್ಯ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಬೆಳ್ತಂಗಡಿ ಉದಯ ನಗರ ಸುದೆಮುಗೇರಿನಲ್ಲಿರುವ‌ ಅನುಗ್ರಹ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ಹಾಗೂ ಸಿಹಿಯನ್ನು ನೀಡಿ ವೃದ್ಧರೊಂದಿಗೆ ಸಮಯವನ್ನು ಕಳೆದರು. ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಬಡ ಕುಟುಂಬಗಳನ್ನು ಗುರುತಿಸಿ 52 ಕೆಜಿ ಅಕ್ಕಿಯನ್ನು ನೀಡಿದರು.


ಚಿಂತನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳಾದ ಶರತ್ ಶೆಟ್ಟಿ, ಗಣೇಶ್ ಲಾಯಿಲ ಭಾಗವಹಿಸಿದ್ದರು. ಮಕ್ಕಳು ತನಗೆ ಹೆತ್ತವರು ನೀಡಿದ ಪಾಕೆಟ್ ಹಣದ ಉಳಿಕೆಯಿಂದ ಈ ಕಾರ್ಯಗಳನ್ನೆಲ್ಲ ಸಾಧಿಸಲು ಸಾಧ್ಯವಾಯಿತು . ಸಮಾಜಕ್ಕೆ ತನ್ನ ಸೇವೆ, ಸಹಕಾರದಿಂದ ಸಹಬಾಳ್ವೆ ಎಂಬ ವಿಷಯವನ್ನು ಅರಿತುಕೊಂಡರು. ಜಿಲ್ಲಾ ಸಂಸ್ಥೆಯಿಂದ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಭಾಗವಹಿಸಿ ವಿಭಿನ್ನ ರೀತಿಯ ಚಿಂತನಾ ದಿನಾಚರಣೆಯ ಆಯೋಜನೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಗೈಡ್ ವಿದ್ಯಾರ್ಥಿಗಳಾದ ಪ್ರಾಪ್ತಿ ವಿ ಶೆಟ್ಟಿ ಹಾಗೂ ಸಿಂಚನ ನಿರೂಪಿಸಿದ ಕಾರ್ಯಕ್ರಮದಲ್ಲಿ ಗೈಡ್ ವಿದ್ಯಾರ್ಥಿ ಪ್ರಷ್ಯಾ ಸ್ವಾಗತಿಸಿ, ಶ್ರುತಾ ಶೆಟ್ಟಿ ವಂದಿಸಿದರು. ಸ್ಕೌಟ್ ಮಾಸ್ಟರ್ ಮಂಜುನಾಥ್ ಸಹಕರಿಸಿದರು. ಸಂಯೋಜಕ ಶಿಕ್ಷಕಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ಸಂಘಟಿಸಿ, ಯಶಸ್ವಿಗೊಳಿಸಿದರು.

Related posts

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ಮೊಗ್ರು : ಮುಗೇರಡ್ಕ ಅಲೆಕ್ಕಿ ಜೈ ಶ್ರೀ ರಾಮ ಶಿಶುಮಂದಿರ ಆಶ್ರಯದಲ್ಲಿ ನಡೆದ ರೀಲ್ಸ್ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ಕೊಕ್ಕಡ ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ: ಅಪಾರ ನಷ್ಟ

Suddi Udaya

ಮಡಂತ್ಯಾರು ನಲ್ಲಿ ಅಮಿತ್ ಶಾ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಸೋಣಂದೂರು: ಕೊಲ್ಪದಬೈಲು ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ: ಮೆಸ್ಕಾಂ ಇಲಾಖೆಯಿಂದ ತೆರವು ಕಾರ್ಯ

Suddi Udaya
error: Content is protected !!