23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಗುರುವಾಯನಕೆರೆ: ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ

ಗುರುವಾಯನಕೆರೆ: ಕಳೆದ ಹಲವಾರು ವರ್ಷಗಳಿಂದ ನಿಸರ್ಗ ಕರ್ಟನ್ ಹಾಗೂ ವಾಲ್ ಪೇಪರ್ ಉದ್ಯಮದೊಂದಿಗೆ ಉತ್ತಮ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ನಾಗೇಶ್ ಕೋಟ್ಯಾನ್ ರವರ ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ ಫೆ.24 ರಂದು ನಡೆಯಿತು.

ಗುರುವಾಯನಕೆರೆಯ ಪ್ರಸಿದ್ದ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಯವರು ಉದ್ಘಾಟಿಸಿ ಶುಭ ಕೋರಿದರು.

ನಿಸರ್ಗ ಆರ್ಕೇಡ್ ಮಾಲಕ ನಾಗೇಶ್ ಕೋಟ್ಯಾನ್ ರವರ ಮಾತ- ಪಿತರಾದ ಗೋಪು ಪೂಜಾರಿ ಮತ್ತು ಶ್ರೀಮತಿ ಸುಶೀಲ ದೀಪ ಪ್ರಜ್ವಲನೆಗೈದು ಸಂಸ್ಥೆಯು ಉತ್ತರೊತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಿವೃತ ಎಸ್.ಪಿ ಪೀತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜಿ.ಪಂ ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ನಾರಾಯಣ ಪೂಜಾರಿ,ತಾ.ಪಂ‌ ಸದಸ್ಯ ಗೋಪಿನಾಥ ನಾಯಕ್,ಎಸ್.ಸಿ‌.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಚಂದ್ರಹಾಸ, ಕಿರಾತಮೂರ್ತಿ ದೇವಸ್ಥಾನದ ಟ್ರಸ್ಟ್ ದಿನೇಶ್, ನಿವೃತ ಮುಖ್ಯೋಪಾಧ್ಯಾಯ ಗೋಪಾಲ್ ಪೂಜಾರಿ,ಸುದ್ದಿ ಬಿಡುಗಡೆ ವಾರಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈ,ಯುವ ಉದ್ಯಮಿಗಳಾದ ಸಚಿನ್ ಶೆಟ್ಟಿ ಕುರೆಲ್ಯ,ಸಾಯಿ ಶೆಟ್ಟಿ ನವಶಕ್ತಿ,ಗೋಪಾಲ ಪೂಜಾರಿ, ವಸಂತ ಪೂಜಾರಿ ಗರ್ಡಾಡಿ,ದಿನೇಶ್ ಪೂಜಾರಿ ಅಂತರ ಬಳಂಜ,ಜಗನ್ನಾಥ್ ಸುಲ್ಕೇರಿಮೊಗ್ರು ,ಯುವ ಉದ್ಯಮಿ ಚಿದಾನಂದ ಇಡ್ಯ,ಆದರ್ಶ್ ಜೈನ್,ಪೋಟೋ ಅಸೋಸಿಯೇಷನ್ ದಾಮೋದರ ಕುಲಾಲ್, ರವಿ ಪೂಜಾರಿ,ವಸಂತ ಹೆಗ್ಡೆ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ಗೋಪಾಲ ಪೂಜಾರಿ, ಲೋಕಮ್ಮ, ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ಜಗನ್ನಾಥ ಪೂಜಾರಿ, ಬೇಬಿಂದ್ರ,ಸಿಂಚನಾ, ಅನ್ವಿ,ಸಂದ್ಯಾ,ಅಮಿತಾ, ಸಮಿತಾ, ಮೋಹಿನಿ ಹಾಗೂ ಬಂಧು ಮಿತ್ರರು ಸಹಕರಿಸಿದರು.

ಸಂಸ್ಥೆಯ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಶ್ರೀಮತಿ ಯಶ್ಮಿತಾ ನಾಗೇಶ್, ಮಕ್ಕಳಾದ ಮಾ.ಯಶ್ವಿನ್ ಎನ್, ಮಾ.ಯುವಿನ್ ಎನ್ ಅಸಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿದರು.

ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.

Related posts

ವೇಣೂರು 5 ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10 ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ

Suddi Udaya

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಾತಿ ವಿಚಾರವನ್ನು ಕೆದಕಿ ಅಪಮಾನಿಸಿರುವುದನ್ನು ಖಂಡಿಸಿ,ರಾಹುಲ್ ಗಾಂಧಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿ, ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ತಹಸೀಲ್ದಾರ್ ಗೆ ಮನವಿ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಆಯುಷ್ಮಾನ್ ಭವ ಆರೋಗ್ಯ ಸೇವೆಗೆ ಚಾಲನೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ

Suddi Udaya

ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ಸೇವೆ ಪ್ರಾರಂಭ

Suddi Udaya

ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬುದು ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!