24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಮ್ಮಾಜೆ ಫಾರ್ಮ್‌ನ ದೇವಿಪ್ರಸಾದ್‌ರಿಗೆ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ

ಬೆಳ್ತಂಗಡಿ: ವಿಜಯ ಕರ್ನಾಟಕ ಪತ್ರಿಕೆ ಹಮ್ಮಿಕೊಂಡ 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕ ರೈತರಿಗೆ ಪುರಸ್ಕಾರ ನೀಡುವ ಆರನೇ ವರ್ಷದ ‘ವಿಕ ಸೂಪರ್ ಸ್ಟಾರ್ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ’ಯಿಂದ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್‌ನ ದೇವಿಪ್ರಸಾದ್ ಅವರು ಪುರಸ್ಕೃತಗೊಂಡಿದ್ದಾರೆ.

ಫೆ.25ರಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್. ಕೆಂಪೇಗೌಡ, ಯೂನಿಯನ್ ಬ್ಯಾಂಕ್‌ನ ಡೆಪ್ಯೂಟಿ ರಿಜೀನಲ್ ಹೆಡ್ ವಿಶುಕುಮಾರ್, ವಿಜಯ ಕರ್ನಾಟಕದ ಆರ್‌ಎಂಡಿ ವಿಭಾಗದ ಸೀನಿಯರ್ ಮ್ಯಾನೇಜರ್ ನಾರಾಯಣ್, ರೆಸ್ಪಾನ್ಸ್ ವಿಭಾಗದ ಚೀಫ್ ಮ್ಯಾನೇಜರ್ ಅರವಿಂದ ಎಂ, ಒಡಿಯೂರು ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ವಿಜಯಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಪ್ರಧಾನ ವರದಿಗಾರ ಸುಧಾಕರ ಸುವರ್ಣ ಹಾಗೂ ಮಹಮ್ಮದ್ ಆರಿಫ್ ಪಡುಬಿದ್ರಿ ಉಪಸ್ಥಿತರಿದ್ದರು.


ಮೊಗ್ರು ಗ್ರಾಮದ ಕಡಮ್ಮಾಜೆಯಲ್ಲಿ ದೇವಿಪ್ರಸಾದ್ ಅವರು ಹೊಂದಿರುವ ಕಡಮ್ಮಾಜೆ ಫಾರ್ಮ್‌ನ ಬಗ್ಗೆ ‘ಸುದ್ದಿ ಉದಯ ಪತ್ರಿಕೆ’ ಕಳೆದ ಜ.10ರಿಂದ ಜ.16ರ ಸಂಚಿಕೆಯಲ್ಲಿ ‘ಉದ್ಯೋಗಕ್ಕಾಗಿ ಕೃಷಿಯನ್ನೇ ನೆಚ್ಚಿಕೊಂಡ ಕಾನೂನು ಪದವೀಧರ ಸಮ್ಮಿಶ್ರ ಕೃಷಿ ಸಾಧಕನಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ’ ಎಂಬ ತಲೆಬರಹದಡಿ ಲೇಖನ ಪ್ರಕಟಿಸಿತ್ತು.

Related posts

ಕರಂಬಾರು: ಕಾಜಿಮುಗೇರು ಗೇರು ತೋಟಕ್ಕೆ ಬೆಂಕಿ

Suddi Udaya

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ನಾಳ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ತಾಳಮದ್ದಳೆ

Suddi Udaya

ಜೋಯಾಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಎಲ್ ಐ ಸಿ ನಿವೃತ್ತ ಎಂ.ಡಿ. ಸುಶೀಲ್ ಕುಮಾರ್ ಭೇಟಿ

Suddi Udaya

ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ಶಾಖೆ ವತಿಯಿಂದ ಪ.ಪಂ ಅಧ್ಯಕ್ಷ ಜಯಾನಂದ ಗೌಡರಿಗೆ ಅಭಿನಂದನೆ

Suddi Udaya
error: Content is protected !!