ಕೋರಂ ಕೊರತೆ ಹಾಗೂ ಇಲಾಖಾಧಿಕಾರಿಗಳ ಗೈರುಹಾಜರಿಯಲ್ಲಿ ರದ್ದುಗೊಂಡ ಮಡಂತ್ಯಾರು ಗ್ರಾಮಸಭೆ

Suddi Udaya

ಮಡಂತ್ಯಾರು: ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಕೋರಂ ಸಮಸ್ಯೆ ಹಾಗೂ ಅಧಿಕಾರಿಗಳ ಗೈರಿನಿಂದ ರದ್ದುಗೊಂಡಿತ್ತು. ಮುಂದಿನ‌ ಗ್ರಾಮಸಭೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಪಂಚಾಯತ್ ಅದ್ಯಕ್ಷೆ ರೂಪಾ ಎಸ್ ಹೇಳಿದರು.

ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ವಿನಯ್ ಗ್ರಾಮ ಸಭೆಯನ್ನು ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಅನುಪಾಲನಾ ವರದಿಯನ್ನು ಅನುಮೋದನೆ ಮಾಡಬೇಕಾದರೆ ಎಲ್ಲಾ ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬರಬೇಕು. ಯಾವುದೇ ಇಲಾಖಾಧಿಕಾರಿಗಳು ಇಲ್ಲದೇ ಹೇಗೆ ವರದಿಯನ್ನು ಅನುಮೋದಿಸುತ್ತೀರಿ. ಅಧಿಕಾರಿಗಳು ಹಾಜರಾಗದಿದ್ದರೆ ಗ್ರಾಮಸಭೆ ಯಾರಿಗೆ ಎಂದರು. ರದ್ದು ಮಾಡಿ ನಾವು ಹೋಗುತ್ತವೆ. ರಾಷ್ಟ್ರೀಯ ಹೆದ್ದಾರಿ ಕೆಲಸವಾಗುತ್ತಿದೆ. ಧೂಳಿನಿಂದ ಕೆಮ್ಮು,ಕಫದಿಂದ ಶಾಲೆಗೆ ಮಕ್ಕಳು ಗೈರಾಗುತ್ತಿದ್ದಾರೆ. ಹೆಚ್ಚಿನವರಿಗೆ ಅನಾರೋಗ್ಯ ಬಂದಿದೆ. ಅಧಿಕಾರಿಗಳು ಬರಬೇಕು ನಮ್ಮ ಪ್ರಶ್ನೆಗಳಿವೆ ಎಂದು ಗ್ರಾಮಸ್ಥ ರಾಜಶೇಖರ್ ಪ್ರಶ್ನಿಸಿದರು.

ಗ್ರಾಮಸಭೆ ಬೇಕಾ ಬೇಡವೇ ಎಂಬ ಚರ್ಚೆ ನಡೆದಾಗ ಒರ್ವ ಗ್ರಾಮಸ್ಥರು ಬೇಕೆಂದರು. ಇನ್ನೊರ್ವರು ಗ್ರಾಮಸಭೆಗೆ ಕೊರಂ ಇಲ್ಲ ಎಂದರು. ಸುಮಾರು10 ಕ್ಕಿಂತ ಹೆಚ್ಚು ಮಂದಿ ಗ್ರಾಮಸಭೆ ರದ್ದುಗೊಳಿಸಿ ಎಂದರು.

ಗ್ರಾಮಸಭೆಯಲ್ಲಿ ಭಾಗವಹಿಸದ ಇಲಾಖಾಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸುವ ಬಗ್ಗೆ ಚರ್ಚೆ ನಡೆದರು ಗ್ರಾಮಸ್ಥರು ಅಧಿಕಾರಿಗಳು ಬರಲೇಬೇಕೆಂದು ಪಟ್ಟು ಹಿಡಿದರು.ಇಲ್ಲಿ ಕೋರಂ ಸಮಸ್ಯೆಯಿದೆ. ಅಧಿಕಾರಿಗಳು ಕೂಡ ಗೈರಾಗಿದ್ದಾರೆ. ಗ್ರಾಮ ಸಭೆ ರದ್ದುಗೊಳಿಸಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಒಂದು ವೇಳೆ ಗ್ರಾಮಸಭೆ ರದ್ದುಗೊಳಿಸದಿದ್ದರೆ ಗ್ರಾಮಸ್ಥರಿಗೆ ನೀವು ಅವಮಾನ ಮಾಡಿದಾಗೆ ಎಂದು ಗ್ರಾಮಸ್ಥರು ಹೇಳಿದರು..

ಇಗಾಗಲೇ ಕೆಲವು ಇಲಾಖಾಧಿಕಾರಿಗಳು ಆಗಮಿಸಿದ್ದಾರೆ.ಎಲ್ಲ ಅಧಿಕಾರಿಗಳಿಗೆ ನಾವು ಆಮಂತ್ರಣ ನೀಡಿದ್ದೇವೆ. ಮುಂದಿನ ಗ್ರಾಮ ಸಭೆಗೆ ಅಧಿಕಾರಿಗಳು ಬರುವಂತೆ ಇವತ್ತು ಒಂದು ನಿರ್ದಾರ ಕೈಗೊಳ್ಳೋಣ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ.ಪ್ರಕಾಶ್ ಎಸ್ ತಿಳಿಸಿದರು.

ಕೊನೆಗೂ ಗ್ರಾಮ ಸಭೆಯನ್ನು ರದ್ದುಗೊಳಿಸುವುದಕ್ಕೆ ಪಂಚಾಯತ್ ಆಡಳಿತ ಮಂಡಳಿ ತಿರ್ಮಾಣಿಸಿ ರದ್ದುಗೊಳಿಸಿತು.

ಉಪಾಧ್ಯಕ್ಷ ಗೋಪಾಲಕೃಷ್ಣ ಕೆ,ಕಾರ್ಯದರ್ಶಿ ಮೋರ್ಲಿನ್ ಕ್ರಿಸ್ತಿನ್ ಡಿಸೋಜಾ, ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಸಂಗೀತ ಶೆಟ್ಟಿ, ವಿಶ್ವನಾಥ ಪೂಜಾರಿ,ಆಗ್ನೇಶ್ ಮೋನಿಸ್,ಮೋಹಿನಿ,ಹರಿಪ್ರಸಾದ್ ಶೆಟ್ಟಿ, ಉಮೇಶ್ ಸುವರ್ಣ,ಹನೀಫ್,ಸಾರಾಸನಫ್ ಯು.ವೈ,ಪಾರ್ವತಿ,ಶೈಲೇಶ್ ಕುಮಾರ್,ರಾಜೀವ,ಶೀಲಾವತಿ,ಶಶಿಪ್ರಭಾ ಉಪಸ್ಥಿತರಿದ್ದರು.

Leave a Comment

error: Content is protected !!