23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ -ಮುಗೇರಡ್ಕ, ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ

ಮೊಗ್ರು : ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ -ಮುಗೇರಡ್ಕ, ಮೊಗ್ರು ಬೆಳ್ತಂಗಡಿ ಇಲ್ಲಿನ ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ ಫೆ..24 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಇದರ ಕಾರ್ಯದರ್ಶಿ ನೇಮಿಚಂದ್ರ ಮುಗೇರಡ್ಕ ಹಾಗೂ ಮುಖ್ಯ ಭಾಷಣಕಾರರಾಗಿ ಸಚಿನ್ ಜೈನ್ ಹಳೆಯೂರು ವಹಿಸಿದರು.

ಮುಖ್ಯ ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶ್ರೀ ಕ್ಷೇತ್ರ ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೋಕ್ತೇಸರರಾದ ಮನೋಹರ ಗೌಡ ಅಂತರ, ಕಡಮ್ಮಾಜೆ ಫಾರ್ಮ್ಸ್ ಪ್ರಗತಿಪರ ಕೃಷಿಕರಾದ ದೇವಿಪ್ರಸಾದ್ ಗೌಡ ಕಡಮ್ಮಾಜೆ, ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಗೌರವಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ ಉಪಸ್ಥಿತರಿದ್ದರು.

ಸಂಜೆ ಮಾತೃ ಪಾದ ಪೂಜೆ, ಭಾರತ್ ಮಾತಾ ಸಭಾ ಕಾರ್ಯಕ್ರಮ, ರಾತ್ರಿ ಶಿಶು ಮಂದಿರ ಬಾಲಗೋಕುಲದ ಮತ್ತು ಮಾತೃ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

Suddi Udaya

ಅರಸಿನಮಕ್ಕಿ: “ಶ್ರೀನಿಧಿ ಜನಸೇವಾ ಕೇಂದ್ರ”ದಲ್ಲಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರ ಸೌಲಭ್ಯ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಪೂಜಾ ಸಮಿತಿಯ ಅಧ್ಯಕ್ಷ ಸಂತೋಷ್ ಬಂಗೇರರವರ ತಂಡದ ಸದಸ್ಯರಿಂದ ನವರಾತ್ರಿಯ ವಿಶೇಷ ಭಜನೆ

Suddi Udaya

ನಡ: ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಸೇವಾ ಭಾರತಿ’ ವತಿಯಿಂದ ಪುಸ್ತಕಗಳ ವಿತರಣೆ

Suddi Udaya

ಕರೆಮಾಡಿದ ತಕ್ಷಣ ರೈತರ ಮನೆಬಾಗಿಲಿಗೆ ಬರಲಿದೆ ಪಶು ಸಂಜೀವಿನಿ

Suddi Udaya
error: Content is protected !!