April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

ಲ್ಯಾಲ: ಇಲ್ಲಿಯ ಶ್ರೀ ಕ್ಷೇತ್ರ ಪುತ್ರಬೈಲು ಶ್ರೀ ಮಹಮ್ಮಾಯಿ ಅಮ್ಮನವರು ಹಾಗೂ ಪರಿವಾರ ಶಕ್ತಿಗಳ ಸ್ಥಳ ಸಾನ್ನಿಧ್ಯದಲ್ಲಿ ಫೆ.25ರಂದು ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ ಜರಗಿತು.

ಫೆ.24ರಂದು ಬೆಳಿಗ್ಗೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನ ಹಾಗೂ ಪರಿವಾರ ಶಕ್ತಿಗಳ ಸಾನ್ನಿಧ್ಯದಲ್ಲಿ ಶುದ್ಧಿ ಕಲಶ, ಸಾನ್ನಿಧ್ಯ ಶುದ್ಧಿ, ಗಣಪತಿ ಹೋಮ ಫೆ.25ರಂದು ಸಂಜೆ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಮತ್ತು ಬಳಗದವರಿಂದ “ಕದಂಬ ಕೌಶಿಕೆ”. ಯಕ್ಷಗಾನ ತಾಳ ಮದ್ದಲೆ ನಡೆಯಿತು.

ರಾತ್ರಿ ಶ್ರೀ ಮಹಮ್ಮಾಯಿ ಅಮ್ಮನವರ ಆಲಯದಿಂದ ಭಂಡಾರ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಿಂದ ದೇವಿಯ ಉತ್ಸವಮೂರ್ತಿ ಹಾಗೂ ಪರಿವಾರ ಶಕ್ತಿಗಳ ಭಂಡಾರವು ಪೂರ್ಣಕುಂಭ, ಕಲಶ, ಚೆಂಡೆ, ಕೊಂಬು, ವಾಲಗ, ಸುಡುಮದ್ದಿನ ಪ್ರದರ್ಶನದೊಂದಿಗೆ, ವೈಭವಪೂರ್ಣ ಮೆರವಣಿಗೆಯೊಂದಿಗೆ ಗಡಿವಾಡು ಸ್ಥಳಕ್ಕೆ ತೆರಳಿ ಪುನಃ ಅಶ್ವತ್ಥಕಟ್ಟೆಯಲ್ಲಿ ಶ್ರೀ ಅಮ್ಮನವರು ಹಾಗೂ ಸ್ಥಳ ಸಾನ್ನಿಧ್ಯದಲ್ಲಿ ಚಾಮುಂಡೇಶ್ವರಿ, ಉಚ್ಚೆಂಗಿ ಹಾಗೂ ಕ್ಷೇತ್ರಪಾಲಕ ಗುಳಿಗ, ಪರಿವಾರ ಶಕ್ತಿಗಳು ಅಲಂಕರಿಸಿ ಮಾರಿಪೂಜೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.,

ಈ ಸಂದರ್ಭದಲ್ಲಿ ಮಹಮ್ಮಾಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಈಶ್ವರ ಬೈರ, ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ಮೋಹನದಾಸ, ಮಹಮ್ಮಾಯಿ ಸೇವಾ ಸಮಿತಿಯ ಉಪಾಧ್ಯಕ್ಷ ವಿ.ಎಸ್.ಸುರೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಸಮಿತಿಯ ಕಾರ್ಯದರ್ಶಿ ಕೃಷ್ಣ ಪ್ಪ ಸಿ, ಕೋಶಾಧಿಕಾರಿ ಹೆಚ್.ಬಿ ಸೀತಾರಾಮ, ಜೊತೆಕಾರ್ಯದರ್ಶಿ ಎನ್.ಕೆ ಸುಂದರ, ಟ್ರಸ್ಟ್ ಕಾರ್ಯದರ್ಶಿ ರಮೇಶ್ ವಿ.ಎಸ್ , ಮಹಮ್ಮಾಯಿ ಸೇವಾಸಮಿತಿಯ ಸರ್ವಸದಸ್ಯರು, ಟ್ರಸ್ಟಿಗಳು ಹಾಗೂ ಊರ ಭಕ್ತಾದಿಗಳು ಭಾಗವಹಿಸಿದರು.

ರಾತ್ರಿ ಸ್ಥಳೀಯ ಮಕ್ಕಳು ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ ನಡೆಯಿತು.

Related posts

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆ

Suddi Udaya

ಬಳಂಜ ಗ್ರಾ.ಪಂ ನೂತನ‌ ಅಧ್ಯಕ್ಷೆ,ಉಪಾಧ್ಯಕ್ಷ ರಿಗೆ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾ.ಪಂ. ಜಮಾಬಂದಿ ಕಾರ್ಯಕ್ರಮ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತೆರಡನೆ ವರ್ಧಂತ್ಯುತ್ಸವ

Suddi Udaya

ಮೊಗ್ರು: ಕಂಚಿನಡ್ಕ ದಲ್ಲಿ ಗುಡ್ಡ ಕುಸಿತ: ಬಿರುಕು ಬಿಟ್ಟ ಮನೆ: ಸಂಪೂರ್ಣ ಹಾನಿ

Suddi Udaya
error: Content is protected !!