29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ: ಸಿದ್ದಬೈಲು ಪರಾರಿ ಸ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

ಕಲ್ಮಂಜ : ಸರಕಾರಿ ಹಿ.ಪ್ರಾ.ಶಾಲೆ, ಸಿದ್ದಬೈಲು ಪರಾರಿ, ರೋಟರಿ ಸಮುದಾಯ ದಳ ಕಲ್ಮಂಜ, ಮತ್ತು ಶಾಲಾಭಿವೃದ್ಧಿ‌ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಹಭಾಗಿತ್ವದಲ್ಲಿ ಫೆ. 26 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಬೈಲು ಪರಾರಿ ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಿನೇಶ್ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಮುದಾಯ ದಳ ಕಲ್ಮಂಜದ ಅಧ್ಯಕ್ಷರು ಸತೀಶ್ ಭಟ್, ಕಲ್ಮಂಜ ಗ್ರಾಮ ಪಂಚಾಯತಿ ಸದಸ್ಯರಾದ ಪ್ರವೀಣ್ ಗೌಡ ಕರಿಯನೆಲ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಧರ್ಣಮ್ಮ, ರೋಟರಿ ಸಮುದಾಯ‌ ದಳ ಕಲ್ಮಂಜ‌ ಸದಸ್ಯರಾದ ಜಯಂತ್ ರಾವ್ ಕಲ್ಮಂಜ‌, ಮೇಜರ್ ಜನರಲ್ ಎಮ್.ವಿ. ಭಟ್ ಮುಂಡಾಜೆ, ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ವಿದ್ಯಾ, ರಾಘವ ಕಲ್ಮಂಜ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.


ಈ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

Related posts

ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಅರ್ಚಕ ಕೆ.ರಮಾನಂದ ಭಟ್ ಕೊಕ್ಕಡ ಅವರಿಗೆ “ಶ್ರೀಕೃಷ್ಣಗೀತಾನುಗ್ರಹ” ಪ್ರಶಸ್ತಿ ಪ್ರದಾನ

Suddi Udaya

ಕೊಲ್ಪಾಡಿಯಲ್ಲಿ ಮಕ್ಕಳ ಹುಣ್ಣಿಮೆಯ ಪ್ರಯುಕ್ತ ಆಟೋಟ ಸ್ಪರ್ಧೆ ಉದ್ಘಾಟನೆ

Suddi Udaya

ಮಾಲಾಡಿ ಸರ್ಕಾರಿ ಐ ಟಿಐಯಲ್ಲಿ ವಾರ್ಷಿಕೋತ್ಸವ

Suddi Udaya

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

Suddi Udaya

ಮಾ.30: ಲಕ್ಷ್ಮೀ ಇಂಡಸ್ಟೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya
error: Content is protected !!