23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಿಯೋ ಕ್ಲಬ್ ಬೆಳ್ತಂಗಡಿ “ಧ್ವನಿ” ವಾಯ್ಸ್ ಆಫ್ ಸರ್ವಿಸ್ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ಬೆಳ್ತಂಗಡಿ : ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಜಿಲ್ಲಾ ಲಿಯೋ ತಂಡ 317D ಏರ್ಪಡಿಸಿದ “ಧ್ವನಿ” ವಾಯ್ಸ್ ಆಫ್ ಸರ್ವಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ತಂಗಡಿ ಲಿಯೋ ಕ್ಲಬ್ ಪ್ರಥಮ ಸ್ಥಾನ ಪಡೆದಿದೆ.


ಫೆ. 25 ರಂದು ಮಂಗಳೂರು ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಹಾಸನ, ಕೊಡಗು, ಜಿಲ್ಲೆ ಒಳಗೊಂಡ ಲಯನ್ಸ್ ಜಿಲ್ಲೆ, 317D ಜಿಲ್ಲಾ ಲಿಯೋ ಕ್ಲಬ್ ಅಧ್ಯಕ್ಷರಾದ ಲಿಯೋ ಡಾ| ರಂಜಿತಾ ಶೆಟ್ಟಿ ಕಾವು ಅಧ್ಯಕ್ಷತೆಯಲ್ಲಿ ಧ್ವನಿ ವಾಯ್ಸ್ ಆಫ್ ಸರ್ವಿಸ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೇಲ್ವಿನ್ ಡಿಸೋಜಾ ಉದ್ಘಾಟನೆ ಮಾಡಿದರು. ನಾಯಕತ್ವ, ಅನುಭವ, ಅವಕಾಶ, ಬಳಸಿಕೊಂಡು ಮೊದಲು ಭಾಗವಹಿಸುವುದು ಮುಖ್ಯ ಎಂಬಂತೆ, ನಿರ್ಣಯ, ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ತೆಗೆದುಕೊಂಡು ಮುಂದಿನ ಸಮಾಜದ ಯೋಚನೆಯನ್ನು ಹಾಗೂ ಯುವಕ ಯುವತಿಯರನ್ನು ಸಮಾಜದ ಆಸ್ತಿಗಳನ್ನಾಗಿ ಮಾಡುವ ಚಿಂತನೆಯೊಂದಿಗೆ ಅದ್ಭುತವಾದ ಪ್ರದರ್ಶನವನ್ನು ವೇದಿಕೆಯ ಮುಖಾಂತರ ಧ್ವನಿ ವಾಯ್ಸ್ ಆಫ್ ಸರ್ವಿಸ್ ಪ್ರಸ್ತುತಪಡಿಸಲಾಯಿತು. ಸಾಧನೆಗಳ ಪ್ರದರ್ಶನ ಹಾಗೂ ಒಗ್ಗಟ್ಟಾಗಿ ಸೇವಾ ಚಟುವಟಿಕೆಯನ್ನು ಮಾಡಿದರೆ ಗೆಲುವು ನಮ್ಮ ಆತ್ಮವಿಶ್ವಾಸದಿಂದ ಶಾಶ್ವತವಾದ ಪರಿಣಾಮವನ್ನು ಬೀರಲು ಸಾಧ್ಯ ಇದನ್ನು ಬೆಳ್ತಂಗಡಿಯ ಲಿಯೋ ಸದಸ್ಯರು ಜಿಲ್ಲೆಯಲ್ಲಿ ನಿರೂಪಿಸಿದ್ದಾರೆ.

ಧ್ವನಿ ವಾಯ್ಸ್ ಆಫ್ ಸರ್ವಿಸ್ ಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿ ಸಹಕಾರ, ಲಿಯೋ ಅಡ್ವೈಸರ್ ಡಾ. ದೇವಿಪ್ರಸಾದ್ ಬೊಲ್ಮ ರವರು ಬರಹ ಹಾಗೂ ವರದಿ, ಲಿಯೋ ಕಾರ್ಯದರ್ಶಿ ನಿರೀಕ್ಷಾ ನಾವರ ಇವರು ವಾಯ್ಸ್, ಲಿಯೋ ಮನೋಜ್ ಧರ್ಮಸ್ಥಳ ಎಡಿಟಿಂಗ್, ಲಿಯೋ ದೀಕ್ಷಿತ್ ನಿಡ್ಲೆ ಇವರು ವಿಡಿಯೋ, ಲಿಯೋ ಅಧ್ಯಕ್ಷೆ ಅಪ್ಸರ ಗೌಡ, ಲಿಯೋ ಕೋಶಾಧಿಕಾರಿ ಅಭಿಜ್ಞಾ ಬೊಲ್ಮ, ಲಿಯೋ ನಿಕ್ಷೇಪ್ ನಾವರ, ಲಿಯೋ ಕರಣ್ ಪವರ್, ಲಿಯೋ ತೇಜಸ್, ಲಿಯೋ ಸದಸ್ಯರು ಹಾಗೂ ಲಯನ್ಸ್ ಸದಸ್ಯರು ಸಹಕರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಥಮ VDG ಲ. ಬಿ. ಎಂ. ಭಾರತಿ, ದ್ವಿತೀಯ VDG ಲ. ಕುಡುಪಿ ಅರವಿಂದ ಶೆಣೈ, ಜಿಲ್ಲಾ ಲಿಯೋ ಚೇರ್ ಪರ್ಸನ್ ಲಯನ್ ಆಲ್ವಿನ್ ನೋರೊನ್ಹ, ಪ್ರಿಯಲತಾ ಬಿಸಿಲ್ವಾ, ಜಿಲ್ಲಾ ಲಿಯೋ ಅಡ್ವೈಸರ್ ರಶ್ಮಿ ಕನಡ, ಲಿಯೋ ಜಿಲ್ಲಾ ಮಾಜಿ ಅಧ್ಯಕ್ಷ ಕವನ್ ಕುಬೇವೂರ್, ಕಿಶನ್ ಬಿಸಿಲ್ವಾ, ಲಿಯೋ ಸಮೀಕ್ಷಾ , ಲಿಯೋ ಲಿರಿಸ ಮಸ್ಕರೇನ್ಹಸ್, ಲಿಯೋ ಅಭಿಲಾಶ್, ಲಿಯೋ ರಿಸಲ್ ಡಿಸೋಜ, ಲಿಯೋ ಪ್ರಸನ್ನ ಪೈ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Related posts

ತೆಂಕಕಾರಂದೂರು ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

Suddi Udaya

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಉಜಿರೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ

Suddi Udaya

ಜೇಸಿಐ ವಲಯ 15ರ ತಾತ್ಕಾಲಿಕ ವಲಯ ತರಬೇತುದಾರರಾಗಿ ಚಂದ್ರಹಾಸ ಬಳಂಜ ಆಯ್ಕೆ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!