24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ಯುವ ವಕೀಲರಿಗೆ ಕಾನೂನು ಕಟ್ಟೆ ಕಾರ್ಯಕ್ರಮ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ಯುವ ವಕೀಲರಿಗೆ ಕಾನೂನು ಕಟ್ಟೆ ಕಾರ್ಯಕ್ರಮವು ಫೆ.28 ರಂದು ವಕೀಲರ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಕೀಲರ ವೇದಿಕೆ ಅಧ್ಯಕ್ಷ ಸಂದೀಪ್ ಡಿಸೋಜ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿ ವಕೀಲರ ಸಂಘದ ಹಿರಿಯ ವಕೀಲರಾದ ಜೆ.ಕೆ ಪೌಲ್ ಮತ್ತು ಪ್ರಶಾಂತ್ ಎಂ ರವರು ಆರ್ಟ್ ಆಫ್ “Cross Examination In Criminal Cases” ಎಂಬ ವಿಷಯದ ಮಾಹಿತಿಯನ್ನು ನೀಡಿ ಯುವ ವಕೀಲರ ಜೊತೆ ಚರ್ಚೆಯನ್ನು ನಡೆಸಿದರು.


ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಹಾಗೂ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಆಗಮಿಸಿದ್ದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ, ಯುವ ವಕೀಲರ ವೇದಿಕೆ ಕಾರ್ಯದರ್ಶಿ ಜ್ಯೋತ್ನ ವೆಲೋನ್ನಾ ಕೊರೆಯ ಉಪಸ್ಥಿತರಿದ್ದರು.

ಅಸ್ಮಾ ಸ್ವಾಗತಿಸಿ, ಜಿತೇಶ್ ಕುಲಾಲ್ ಧನ್ಯವಾದವಿತ್ತರು.

Related posts

ಪುಂಜಾಲಕಟ್ಟೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಸಾಧಕ 10 ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಸ.ಪ್ರ. ದರ್ಜೆ ಕಾಲೇಜಿನಲ್ಲಿ ಮತದಾರರ ಜಾಗೃತಿ ಅರಿವು ಕಾರ್ಯಕ್ರಮ

Suddi Udaya

ಉಳ್ಳಾಲ ಖಾಝಿಯಾಗಿ ಶೈಖುನಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನೇಮಕ

Suddi Udaya

ಉಳ್ಳಾಲ ಸಯ್ಯಿದ್ ಮದನಿ ವಲಿಯುಲ್ಲಾಹಿ ದರ್ಗಾಶರೀಫ್ ನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತೆ ವಿಶೇಷ ಪ್ರಾರ್ಥನೆ

Suddi Udaya

ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ: ವಾಣಿ ಆಂ.ಮಾ.ಪ್ರೌ. ಶಾಲೆಗೆ ರನ್ನರ್‍ಸ್ ಚಾಂಪಿಯನ್ ಮತ್ತು ಹಲವು ಪ್ರಶಸ್ತಿಗಳು

Suddi Udaya

ಜೂ. 16: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Suddi Udaya
error: Content is protected !!