25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ವಿಕಲಚೇತನರ ವಿಶೇಷ ಗ್ರಾಮ ಸಭೆ

ನಿಡ್ಲೆ ಗ್ರಾಮದ ವಿಕಲಚೇತನರ ವಿಶೇಷ ಗ್ರಾಮ ಸಭೆ ನಿಡ್ಲೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಫೆ.27 ರಂದು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲ ಇವರ ಅಧ್ಯಕ್ಷತೆ ಯಲ್ಲಿ ನಡೆಸಲಾಯಿತು.


ಮುಖ್ಯ ಅತಿಥಿಗಳಾಗಿ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್.ಎಂ, ಗ್ರಾಮ ಪಂಚಾಯಿತಿನ ಸದಸ್ಯರಾದ ಶ್ರೀಮತಿ ಹೇಮಾವತಿ.ಕೆ, ಮೋಹನ್ ಪೂಜಾರಿ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.


ಬೆಳ್ತಂಗಡಿ ತಾಲೂಕಿನ ಪುನರ್ ವಸತಿ ಸಂಯೋಜಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಿಡ್ಲೆ ಸಮುದಾಯ ಆರೋಗ್ಯ ಕೇಂದ್ರ ಸಮುದಾಯ ಅಧಿಕಾರಿ ಶ್ರೀಮತಿ ವಿನುತಾ ರವರು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.


ಗ್ರಾಮ ಸಭೆಯಲ್ಲಿ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆಯಾದ ಕುಮಾರಿ ಹೇಮಲತಾ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. ಗ್ರಾಮ ಸಭೆಯಲ್ಲಿ ಒಟ್ಟು ಆರು ಜನ ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರು, ಪಂಚಾಯಿತಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಪಕ್ ರಾಜ್.ಎಂ ಸ್ವಾಗತಿಸಿದರು, ಕಾರ್ಯದರ್ಶಿಯಾದ ಕೆ.ಪಿ.ಕೇಶವ ಗೌಡ ನಿರೂಪಿಸಿದರು.

Related posts

ಅರಣ್ಯದ ನಡುವೆ ಬಿಟ್ಟು ಹೋದ ಮಾರುತಿ ಕಾರು-ವಾರುಸುದಾರರ ಸುಳಿವಿಲ್ಲ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ:

Suddi Udaya

ಬೆಳ್ತಂಗಡಿ ವರ್ತಕರ ಸಂಘದ ಸಭೆ: ಮಾ.10 ರಂದು ಜನಸಂಪರ್ಕ ಕಾರ್ಯಕ್ರಮ ಮಾಡಿಸುವುದಾಗಿ ತೀರ್ಮಾನ

Suddi Udaya

ಲಾಯಿಲ ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ನ ಬೆಳ್ಳಿ ಹಬ್ಬ – ಸಂಭ್ರಮ ಸಡಗರದಿಂದ ಆಚರಣೆ

Suddi Udaya

ಕೊಕ್ರಾಡಿ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿ ಇದರ ಪುನರ್ ಪ್ರತಿಷ್ಠೆ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.2ಲಕ್ಷ ದೇಣಿಗೆ ಹಸ್ತಾಂತರ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!