April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಧರ್ಮಸ್ಥಳ: ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು.

ಮುಖ್ಯ ಶಿಕ್ಷಕ ಸುಬ್ರಹ್ಮ ಣ್ಯ ರಾವ್ ಅವರು ಮಾತನಾಡಿ, ಭಾರತ ರತ್ನ ಸರ್ ಸಿ ವಿ ರಾಮನ್ ಅವರ ಜನ್ಮದಿನದ ಬಗ್ಗೆ ಮಾತನಾಡಿದರು. “ಭಾರತ ಕಂಡ ಶ್ರೇಷ್ಠ ವಿಜ್ಞಾನಿಯ ಜನ್ಮ ದಿನಾಚರಣೆಯ ನಿಮಿತ್ತ ಈ ದಿನವನ್ನು ನಾವು ನೆನಪಿಸಿಕೊಳ್ಳುವುದರ ಜೊತೆಗೆ ನಾವು ಕಂಡ ವಿಚಾರದ ಬಗ್ಗೆ ಪ್ರಶ್ನಿಸುವ, ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಚಾರಿಕತೆಯನ್ನು ಬೆಳೆಸಿಕೊಂಡಾಗ ಮಹಾನ್ ಸಂಶೋಧನೆಗಳಿಗೆ ನಾಂದಿಯಾಗುತ್ತದೆ” ಎಂದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಶಿಕ್ಷಕಿ ಉಷಾ ಕುಮಾರಿ ಬೋಧಿಸಿದರು.

ಶಿಕ್ಷಕ ಶೇಖರ್ ಗೌಡ ನಿರೂಪಿಸಿದರು. ಶಿಕ್ಷಕಿ ಕಾವ್ಯಾ ಸ್ವಾಗತಿಸಿ, ಧನ್ಯವಾದವಿತ್ತರು.

ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.

Related posts

ಇಳಂತಿಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಶ್ರಾವಣ ತರಬೇತಿ ಸಪ್ತಾಹದ ಉದ್ಘಾಟನೆ

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆ ಗೆ ಎಲ್.ಐ.ಸಿ ಯಿಂದ ಕೊಡುಗೆ

Suddi Udaya

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಲಾಯಿಲ: ಆಟೋಚಾಲಕ ನಾಗೇಶ್ ನಿಧನ

Suddi Udaya
error: Content is protected !!