ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ ಗ್ರಾ.ಪಂ. ನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

ಸುಲ್ಕೇರಿ : ಸುಲ್ಕೇರಿ ಗ್ರಾಮ ಪಂಚಾಯತ್ ನಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವು ಮಾ.4ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗಿರಿಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಸಿ. ಪಿ..ಸಿ.ಆರ್.ಐ ವಿಟ್ಲ ಇಲ್ಲಿನ ವಿಜ್ಞಾನಿಗಳಾದ ಡಾ. ಭವಿಷ್ಯ ಇವರು ಮಾಹಿತಿ ನೀಡಿದರು.
ಉಪಾಧ್ಯಕ್ಷರಾದ ಶುಭಕರ್ ಪೂಜಾರಿ, ಸದಸ್ಯರಾದ ರವಿ ಪೂಜಾರಿ, ನಾರಾಯಣ ಪೂಜಾರಿ, ಶ್ರೀಮತಿ ಯಶೋದಾ ಬಂಗೇರ , ಶ್ರೀಮತಿ ಪ್ರೇಮಾ, ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ತೋಟಗಾರಿಕಾ ಅಧಿಕಾರಿಗಳಾದ ಭೀಮ್ ರಾಯ್, ಮಹಾವೀರ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ ಪಿ ಸ್ವಾಗತಿಸಿ, ವಂದಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು. ಎಲೆಚುಕ್ಕೆ ರೋಗದ ಔಷಧ ವಿತರಿಸಲಾಯಿತು.

Related posts

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆ : ಕು | ನಿತ್ಯಶ್ರೀ ಖಂಡಿಗ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ : ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದ ಶಾಸಕ ಹರೀಶ್ ಪೂಂಜರಿಗೆ: ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಗೌರವಾರ್ಪಣೆ

Suddi Udaya

ಉಜಿರೆಯಲ್ಲಿ ವಿಶ್ವಕರ್ಮ ಬ್ಯಾಂಕ್‌ನಿಂದ ಸ್ವಚ್ಛತಾ ಅಭಿಯಾನ

Suddi Udaya

ಬಳಂಜ ದೇವಸ್ಥಾನದ ಜಾತ್ರಾ ಮಹೋತ್ಸವ, ದೇವರ ದರ್ಶನ ಬಲಿ ಉತ್ಸವ, ನೂರಾರು ಭಕ್ತರು ಭಾಗಿ

Suddi Udaya
error: Content is protected !!