April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ: ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯದ್ಯಕ್ಷೆ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಮುಖಂಡೆ ಶ್ರೀಮತಿ ವಸಂತ ಮುರುಳಿ ಆಚಾರ್ಯ ಬೆಂಗಳೂರು ಹಾಗೂ ಉಪಾದ್ಯಕ್ಷೆ ಶ್ರೀಮತಿ ಆಶಾ ಗುರೂಜಿ ಉಮೇಶ್ ಆಚಾರ್ಯರವರು ಮಾ.4ರಂದು ಧರ್ಮಸ್ಥಳಕ್ಕೆ ಆಗಮಿಸಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು.

ನಂತರ ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರೂ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಗೇರುಕಟ್ಟೆಯ ಕೊರಂಜ ದಿವಾಕರ ಆಚಾರ್ಯರವರ ಮನೆಗೆ ಆಗಮಿಸಿ, ಆಶೀರ್ವಾದ ಪಡೆದರು.

ಇವರ ಜೊತೆ ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಭುವನೇಶ್ ಜಿ, ವೆನ್ಲಾಕ್ ಜಿಲ್ಲಾಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ,ನಾಳ ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರಬಂಧಕ ರಾಘವ ಎಚ್, ಪತ್ರಕರ್ತರಾದ ಕೆ.ಎನ್.ಗೌಡ,ಸತೀಶ್ ನಾಯ್ಕ್ ನಾಳ,ನಾಳ ದೇವಸ್ಥಾನದ ಮ್ಯಾನೇಜರ್ ಗಿರೀಶ್ ಶೆಟ್ಟಿ, ಉದ್ಯಮಿಗಳಾದ ಯೋಗಿಶ್ ಎಸ್.ಆರ್.ಹಾಜರಿದ್ದರು.

Related posts

ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಯಿಂದ ‘ಮಕ್ಕಳ ದಿನ -ಕ್ರೀಡಾಸಂಗಮ 2024’ ಆಚರಣೆ

Suddi Udaya

ಗುರುವಾಯನಕೆರೆಯ ಸುಬೇದಾರ್ ಏಕನಾಥ ಶೆಟ್ಟಿಯವರಿಗೆ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ

Suddi Udaya

ಎಸ್. ಡಿ. ಎಮ್. ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃ ತಿಕ ಸಂಘದ ವತಿಯಿಂದ ‘ಆಟಿಡ್ ಗೊಬ್ಬುಗ’

Suddi Udaya

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ

Suddi Udaya

ಉಜಿರೆ: ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ರಸ್ತೆ ಬದಿ ಹಣ್ಣಿನ ಗಿಡ ನಾಟಿ, ನೆಟ್ಟ ಗಿಡಗಳ ಪುನಶ್ಚೇತನ ಮತ್ತು ಇಂಗು ಗುಂಡಿ ರಚನಾ ಕಾರ್ಯಕ್ರಮ

Suddi Udaya
error: Content is protected !!