April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪವು ಪತ್ತೆಯಾಗಿದ್ದು ಕಳೆಂಜ ಗ್ರಾಮ ಕರ್ಮಾಜೆ ಶೌರ್ಯ ಸ್ವಯಂ ಸೇವಕರಾದ ಆನಂದ ಎಂಬವರ ಮನೆಯ ಬಾವಿಯಲ್ಲಿ, ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ, ಹಾಗೂ ಕೊಕ್ಕಡ ಪೊಟ್ಲಡ್ಕ ಎಂಬಲ್ಲಿ ಮನೆಯ ಅಟ್ಟದಲ್ಲಿ ಮಾ.3 ರಂದು ಕಾಳಿಂಗ ಸರ್ಪವು ಪತ್ತೆಯಾಗಿದ್ದು , ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಕಳೆಂಜ ಗ್ರಾಮ ಕರ್ಮಾಜೆಯಲ್ಲಿ ಮನೆಯ ಬಾವಿಯಲ್ಲಿ, ಕಾಳಿಂಗ ಸರ್ಪವನ್ನು ನೋಡಿ ನಿಡ್ಲೆ ಘಟಕದ ಸಂಯೋಜಕರಾದ ಗಿರೀಶ್ ಗೌಡ ರವರು ಸ್ನೇಕ್ ಪ್ರಕಾಶ್ ರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಈ ಸಂದರ್ಭ ಕಳೆಂಜ ಘಟಕದ ಸಂಯೋಜಕಿಯಾದ ಆಶಾಲತಾ ಇದ್ದರು.


ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ ಕಾಳಿಂಗ ಸರ್ಪವು ಕಂಡು ಬಂದಿದ್ದು ಕೂಡಲೇ ಕೊಕ್ಕಡದ ಕಮಲಾಕ್ಷ ಗೌಡರವರು ಸ್ನೇಕ್ ಪ್ರಕಾಶ್ ರವರಿಗೆ ತಡರಾತ್ರಿ 1 ಗಂಟೆಗೆ ಕರೆ ಮಾಡಿ ತಿಳಿಸಿದಾಗ , ಪಿ ಜೆ ಪಾಪಚನ್ ರವರ ಜೊತೆ ಸ್ಥಳಕ್ಕೆ ತೆರಳಿ ಹಾವುವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

Related posts

ಉಜಿರೆಯ ಪಾಕತಜ್ಞ ಶ್ರೀನಿವಾಸ ಕಾರಂತ ನಿಧನ 

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Suddi Udaya

ಸೆ.12-13: ಸೌಜನ್ಯ ಅತ್ಯಾಚಾರ ಪ್ರಕರಣ ಆರೋಪಿಗಳ ಪತ್ತೆಗೆ ಆಗ್ರಹಿಸಿ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ

Suddi Udaya

ವಿಟ್ಲ ಸಾಲೆತ್ತೂರಿನ ಹರೀಶ್ ಪೂಂಜ ಅಭಿಮಾನಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya

ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!