23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ನಾಳೆ ನಡೆಯುವ ಶಿವರಾತ್ರಿಗೆ ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಆಗಮಿಸಲಿದ್ದು ಅವರ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ತುಮಕೂರು ಮೊದಲಾದ ಊರುಗಳಿಂದ 26,000 ಮಂದಿ ಪಾದಯಾತ್ರಿಗಳು ಬರುವುದಾಗಿ ಪೂರ್ವಭಾವಿಯಾಗಿ ತಿಳಿಸಿದ್ದು, ಅವರಿಗೆ ಧರ್ಮಸ್ಥಳದಲ್ಲಿ ವಸತಿ ಛತ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.


ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಕಾರ್ಯಾಲಯವನ್ನು ಮಾ.6 ರಂದು ಧರ್ಮಾಧಿಕಾರಿ  ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಅವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು.
ಸ್ವಾಗತಕಾರ್ಯಾಲಯದಲ್ಲಿ ಪಾದಯಾತ್ರಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಅವರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ ಕೊಡಲಾಗುವುದು. ಪಾನೀಯದ ವ್ಯವಸ್ಥೆಯೂ ಇದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯವೂ ಇದೆ.


ಈಗಾಗಲೆ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ, ಉಜಿರೆ ತಲುಪಿದ್ದು ನಾಳೆ ಶುಕ್ರವಾರ ಧರ್ಮಸ್ಥಳ ತಲುಪುವರು. ಸಂಜೆ 6 ಗಂಟೆಗೆ ದೇವಸ್ಥಾನ ಬಳಿ ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಶಿವಪಂಚಾಕ್ಷರಿ” ಪಠಣವನ್ನು ದೀಪ ಬೆಳಗಿಸಿ  ಉದ್ಘಾಟಿಸುವರು. ಬಳಿಕ ಇಡಿ ರಾತ್ರಿ ಭಕ್ತಾದಿಗಳು ಭಜನೆ, ಪ್ರಾರ್ಥನೆ, ಧ್ಯಾನದಲ್ಲಿ ಉಪವಾಸ, ವೃತ-ನಿಯಮಗಳೊಂದಿಗೆ ಜಾಗರಣೆ ಮಾಡುವರು. ದೇವಸ್ಥಾನದಲ್ಲಿ ದೇವರದರ್ಶನಕ್ಕೆ ಅವಕಾಶವಿದೆ. ಶನಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.


ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯಪ್ರಸಾದ್, ಶ್ರೀಮತಿ ಭವಾನಿ ಮಾಹಿತಿ ಕಛೇರಿಯ ವ್ಯವಸ್ಥಾಪಕ ಮೋಹನ್, ವಿಜಯ ಗೌಡ ಹಾಗೂ ಸಂತೋಷ್ ಗೌಡ ಉಪಸ್ಥಿತರಿದ್ದರು. 

Related posts

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗರ್ಡಾಡಿ ವಲಯದ ಭಜನಾ ಮಂಡಳಿಗಳ ಸಭೆ

Suddi Udaya

ಶಿರ್ಲಾಲು: ಶ್ರೀ ರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ರವರ ಅಕೌಂಟ್ ಹ್ಯಾಕ್

Suddi Udaya

ಮಡಂತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವು: ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ

Suddi Udaya

ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಸೇವಾಭಾರತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

Suddi Udaya
error: Content is protected !!