ಬೆಳ್ತಂಗಡಿ : ಗೇರುಕಟ್ಟೆ ಕೊರಂಜ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪೋಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಸಭೆ ಮಾ.6 ರಂದು ಶಾಲಾ ಸಭಾಂಗಣದಲ್ಲಿ ಜರುಗಿತು.
ಶಾಲಾ ಸರಕಾರಿ ಶಾಲೆಯನ್ನು ಶೈಕ್ಷಣಿಕವಾಗಿ ಮತ್ತಷ್ಟು ಬಲವರ್ಧನೆಗೊಳಿಸಲು ಅಗತ್ಯವಾದ ಗ್ರಂಥಾಲಯ ಉಪಕರಣಗಳು, ಕ್ರೀಡಾಲಯ ಪೀಠೋಪಕರಣಗಳು, ಪಾಠೋಪಕರಣಗಳು,ಇ ಕಲಿಕಾ ಕೇಂದ್ರ ಅಭಿವೃದ್ಧಿ ಪಡಿಸಲು ಶಾಲಾ ಹಳೆಯ ವಿಧ್ಯಾರ್ಥಿಗಳ ಸಂಘದ ರಚನೆಯನ್ನುಮಾ.31ರ ಅಂತ್ಯದಲ್ಲಿ ಮಾಡುವಂತೆ ಸರಕಾರದ ಆದೇಶವನ್ನು ದೈಹಿಕ ಶಿಕ್ಷಣ ಶಿಕ್ಷಕ ರವಿರಾಜ್ ಸಭೆಯಲ್ಲಿ ವಾಚಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜನಾರ್ದನ ಗೌಡ ಕೆ, ಉಪಾಧ್ಯಕ್ಷೆ ಶ್ರೀಮತಿ ವನಿತಾ, ಕಾರ್ಯದರ್ಶಿ ಭುವನೇಶ್ ಜಿ, ಜತೆ ಕಾರ್ಯದರ್ಶಿ ಸಿದ್ದೀಕ್ ಜಿ.ಎ., ಕೋಶಾಧಿಕಾರಿ ಯೋಗೀಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎನ್. ಗೌಡ. ಕಲಾಯಿತೋಟ್ಟು, ಸುಭಾಷಿಣಿ ಕೆ., ಅಬೂಬಕ್ಕರ್, ವೆಂಕಪ್ಪ ಪೂಜಾರಿ, ವಿಂಧ್ಯ, ಅಶ್ವಿನಿ, ಸುಶೀಲಾ ಅವರನ್ನು ಆಯ್ಕೆ ಮಾಡಲಾಯಿತು.
ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ,ಕಳಿಯ ಗ್ರಾಮ ಸದಸ್ಯ ಹರೀಶ್ ಕುಮಾರ್ ಬಿ.ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸುಭಾಷಿಣಿ ಜನಾರ್ಧನ ಗೌಡ ಕೆ, ಮುಖ್ಯ ಶಿಕ್ಷಕಿ ಶಾಂತಾ ಎಸ್, ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಮುನಿರಾ ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಜನಾರ್ದನ ಗೌಡ ಕೆ, ಉಪಸ್ಥಿತರಿದ್ದರು.