23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಮಹಿಳೆಯ ಕಾಲಿನ ಮೇಲೆ ಹರಿದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ: ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ದ್ವಾರದ ಬಳಿ ಕಾರೊಂದು ಮಹಿಳೆಯ ಕಾಲಿನ ಮೇಲೆ ಹರಿದು ಹೋದ ಪರಿಣಾಮ ಕಾಲಿನ ಬೆರಳುಗಳಿಗೆ ರಕ್ತ ಗಾಯವಾದ ಘಟನೆ ಮಾ.5ರಂದು ವರದಿಯಾಗಿದೆ.

ಘಟನೆ ವಿವರ: ಚನ್ನರಾಯಪಟ್ಟಣ ತಾಲೂಕು, ಹಾಸನ ನಿವಾಸಿ ಶ್ರೀಮತಿ ರೇಖಾ ಸಿ.ಎಸ್ (39ವ) ಎಂಬವರ ದೂರಿನಂತೆ, ಸದ್ರಿಯವರು ತನ್ನ ನೆರೆಕೆರೆಯವರಾದ ಜಯಲಕ್ಷ್ಮಿ, ಮಂಜುಳಮ್ಮರವರುಗಳೊಂದಿಗೆ, ಮಾ.05 ರಂದು ರಾತ್ರಿ ದೇವರ ದರ್ಶನ ಮಾಡುವ ಸಲುವಾಗಿ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ದ್ವಾರದ ಬಳಿ ನಿಂತುಕೊಂಡಿರುವಾಗ, KA52B9983 ನೇ ಕಾರನ್ನು ಅದರ ಚಾಲಕ ಮಣಿಕಂಠ ಎಂಬವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ರೇಖಾ ಸಿ.ಎಸ್. ರವರ ಎರಡು ಕಾಲಿನ ಮೇಲೆ ಕಾರಿನ ಚಕ್ರ ಹರಿದು ಹೋದ ಪರಿಣಾಮ, ರೇಖಾರವರ ಕಾಲಿನ ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ.

ಅವರನ್ನು ಚಿಕಿತ್ಸೆಗಾಗಿ ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬುದಾಗಿ, ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 279,337 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ: ಕೆ.ವಸಂತ ಬಂಗೇರ ರವರ ನುಡಿನಮನ ಕಾರ್ಯಕ್ರಮಕ್ಕೆ ಆಹ್ವಾನ

Suddi Udaya

ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಉಚಿತ ಯೋಗ ಶಿಕ್ಷಣ ತರಗತಿ ಉದ್ಘಾಟನೆ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ನಡ್ವಾಲ್ ಸಿರಿಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಗಾರ

Suddi Udaya

ವೇಣೂರು ವಿದ್ಯಾನಗರ ಬಳಿ ಲೂಯಿಸ್ ರವರ ಮನೆಯ ಕಾಂಪೌಂಡ್ ಕುಸಿತ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!