23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

ಬೆಳ್ತಂಗಡಿ: ಮಾರ್ಚ್ 9ರಂದು ಶನಿವಾರ ಪೂರ್ವಾಹ್ನ ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಂಗಣದಲ್ಲಿ ನಡೆಯಲಿರುವ ಸರ್ಕಾರದ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶಕ್ಕೆ ಫಲಾನುಭವಿಗಳಿಗೆ ಉಚಿತವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತೀ ಗ್ರಾಮ ಪಂಚಾಯತಿಗೆ ಬಸ್ಸುಗಳನ್ನು ಒದಗಿಸಲಾಗಿದ್ದು ಮಾರ್ಗಸೂಚಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಗ್ರಾಮ ಪಂಚಾಯಿತಿಗಳಿಂದ ಬಸ್ಸುಗಳು ಹೊರಡಲಿದ್ದು ಸಮಾವೇಶ ಮುಗಿದ ಬಳಿಕ ಫಲಾನುಭವಿಗಳನ್ನು ವಾಪಾಸು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ ಅಥವಾ ಅಂಗನವಾಡಿ ಕಾರ್ಯಕರ್ತೆಯವರನ್ನು ಸಂಪರ್ಕಿಸಬಹುದೆಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎಸ್.ತಿಳಿಸಿದ್ದಾರೆ.

Related posts

ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮಿತ್ತ ಬಾಗಿಲು ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಸಾಧನಾ ಪ್ರಶಸ್ತಿ,

Suddi Udaya

ರಸ್ತೆ ಬದಿ ವಾಹನ ನಿಲ್ಲಿಸುವರಿಗೆ ಎಚ್ಚರಿಕೆ, ಬ್ಯಾಟರಿ ಕಳ್ಳರಿದ್ದಾರೆ: ಸುಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಾಹನಗಳ ಬ್ಯಾಟರಿ ಕಳವು; ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ 77ನೇ ಹುಟ್ಟುಹಬ್ಬ ಆಚರಣೆ

Suddi Udaya

ಶೇಖರ ಬಂಗೇರರಿಗೆ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನುಡಿ ನಮನ

Suddi Udaya

ವೇಣೂರು: ಹಂದೇವ್ ನಲ್ಲಿ ಸಂಜೀವ ದೇವಾಡಿಗರವರಿಗೆ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಎಸ್ ಡಿ‌ ಎಮ್ ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ರವರಿಂದ ಹಸ್ತಾಂತರ

Suddi Udaya
error: Content is protected !!