ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಮಂಜುಳೇಶ ದೇವರ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಉತ್ಸವವು ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಧಾರ್ಮಿಕ ವಿಧಿಗಳೊಂದಿಗೆ ಮಾ 8 ರಂದು ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪೂರ್ವಾಹ್ನ ಶ್ರೀ ಮಂಜುಳೇಶ ದೇವರ ಸನ್ನಿಧಿಯಲ್ಲಿ ವೈದಿಕರಿಂದ ಸಾಮೂಹಿಕ ರುದ್ರ ಪಾರಾಯಣ,ಶ್ರೀ ಮಂಜುಳೇಶ ದೇವರಿಗೆ ಶತರುದ್ರಾಭಿಷೇಕ ಹಾಗು ಮದ್ಯಾಹ್ನ ಮಹಾಪೂಜೆ ನಡೆಯಿತು . ಶಾಲಾ, ಕಾಲೇಜು ವಿದ್ಯಾರ್ಥಿಗಳು,ಊರ ಪರಊರ ಭಕ್ತಾದಿಗಳು ಮತ್ತು ಧರ್ಮಸ್ಥಳ ಪಾದಯಾತ್ರಿಗಳು ಅಧಿಕ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸಂಜೆ ದೇವಸ್ಥಾನ ಮುಂಭಾಗದ ವೇದಿಕೆಯಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿ,ಶ್ರೀ ಮಹಮ್ಮಾಯಿ ಭಜನಾ ಮಂಡಳಿ,ಶ್ರೀ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ,ಶ್ರೀ ಮಾತೃ ಮಂಡಳಿ,ಶ್ರೀ ಕೃಷ್ಣ ಭಜನಾ ಮಂಡಳಿ ಮುಂಡತ್ತೋಡಿ, ಮಾಚಾರು ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿ,ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ,ಉಜಿರೆಯ ಶ್ರೀ ಮಾರಿಕಾಂಬಾ ಭಜನಾ ಮಂಡಳಿ ಹಾಗು ಬೆಳ್ತಂಗಡಿ ಶ್ರೀ ವಿವೇಕ ಜಾಗೃತಿ ಬಳಗದವರಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.