25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿ

ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ತಂಗಡಿ; ವಿದ್ಯಾರ್ಥಿಗಳನ್ನೇ ಗುರಿಯಾಗಿಸಿರಿಕೊಂಡು ವ್ಯಸನಗಳನ್ನು ಬಿತ್ತುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಸಾಕಷ್ಟು ಎಚ್ಚರ ಮುಖ್ಯ. ವಿದ್ಯಾರ್ಥಿಗಳು ಈ ರೀತಿಯಾಗಿ ಯಾವುದೇ ದುಶ್ಚಟ್ಲಗಳಿಗೆ ಬಲಿ‌ಬೀಳದಂತೆ ಜಾಗ್ರತೆ ವಹಿಸಬೇಕು ಎಂದು ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ನಾಮದೇವ ರಾವ್ ಮುಂಡಾಜೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಸೆ.9 ರಂದು ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ‌ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ‌ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರು ಮಾತನಾಡಿ, ವಿದ್ಯಾರ್ಥಿ‌ ಜೀವನ ಪಾವನವಾದದ್ದು. ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕಾದ ನೀವು ಯಾವುದೇ ವ್ಯಸನಗಳ ಕಡೆಗೆ ಆಕರ್ಷಿತರಾಗಬಾರದು. ಅದಕ್ಕಾಗಿ ಗ್ರಾ. ಯೋಜನೆ ಹಾಗೂ ಜನಜಾಗೃತಿ ವೇದಿಕೆ ಈ‌ಮಹತ್ ಕಾರ್ಯ‌ಕೈಗೆತ್ತಿಕೊಂಡಿದೆ ಎಂದರು. ಪತ್ರಕರ್ತ, ಜನಜಾಗೃತಿ ವೇದಿಕೆಯ ತಾ.ಸಮಿತಿ ಸದಸ್ಯ ಅಚ್ಚು ಮುಂಡಾಜೆ ಸಂಪನ್ಮೂಲ ವ್ಯಕ್ತಿಯಾಗಿದ್ದು, ವ್ಯಸನಗಳಿಂದ ಆಗುವ ಅನಾಹುತಗಳ ಬಗ್ಗೆ ಉದಾಹರಣೆ ಸಹಿತ ಮಾಹಿತಿ‌ ನೀಡಿದರು.
ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ದನ ಮಾಚಾರು ಪ್ರಸ್ತಾವನೆಗೈದರು. ವಿಭಾಗದ ಸೇವಾ ಪ್ರತಿನಿಧಿ ದಿಶಾ ಜಿನೇಶ್ ವೇದಿಕೆಯಲ್ಲಿ‌ ಉಪಸ್ಥಿತರಿದ್ದರು.
ಶಿಕ್ಷಕಿ ಸಾವಿತ್ರಿ ಸ್ವಾಗತಿಸಿದರೆ, ಹೇಮಲತಾ ನಿರೂಪಿಸಿದರು.‌ ಶಿಕ್ಷಕ ಸುಧೀಂದ್ರ, ವಿದ್ಯಾರ್ಥಿ ನಾಯಕಿ ಮುಕ್ಷಿತಾ, ಉಪನಾಯಕ ಮುಹಮ್ಮದ್ ಸಾನಿದ್ ಸಹಕಾರ ನೀಡಿದರು. ಶಿಕ್ಷಕಿ
ಹೇಮಲತಾ ಧನ್ಯವಾದವಿತ್ತರು.

Related posts

ಬೆಳಾಲುನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ವತಿಯಿಂದ ನೀಟ್ ಸಾಧಕ ಆದಿತ್ ಜೈನ್ ಗೆ ಸನ್ಮಾನ

Suddi Udaya

ಬೆಳಾಲು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ ರಘು ಭೇಟಿ :

Suddi Udaya

ಕಡಿರುದ್ಯಾವರ ಕುಕ್ಕಾವು ಕಾರ್ಯಕ್ಷೇತ್ರದಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ

Suddi Udaya

ಸೆ.16: ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya
error: Content is protected !!