23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರದ್ಧಾಕೇಂದ್ರಗಳಲ್ಲಿ “ದೇವವೃಕ್ಷ” ನೆಡುವ ಅಭಿಯಾನಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಧರ್ಮಸ್ಥಳ: ನದಿ, ಗಿಡ, ಬೆಟ್ಟ, ಗುಡ್ಡ – ಹೀಗೆ ಪ್ರಕೃತಿಯಲ್ಲೇ ದೇವರ ಸ್ವರೂಪ ಕಂಡು ಆರಾಧಿಸುವ ಪರಂಪರೆ ಭಾರತೀಯರದ್ದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಮಾ.8 ರಂದು ಧರ್ಮಸ್ಥಳದಲ್ಲಿ ಉದ್ಯಾನದಲ್ಲಿ ರುದ್ರಾಕ್ಷಿ ಗಿಡವನ್ನು ನೆಟ್ಟು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಅರಳಿ, ರುದ್ರಾಕ್ಷಿ, ಪಾರಿಜಾತ, ಬಿಲ್ವಪತ್ರೆ, ಶಮಿ ಮೊದಲಾದ ದೇವವೃಕ್ಷಗಳ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಜನಸೇವಾ ಟ್ರಸ್ಟ್ ನ ಯೋಜನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಎಲ್ಲರೂ ಆಸಕ್ತಿಯಿಂದ ಅಭಿಯಾನಕ್ಕೆ ಪ್ರೋತ್ಸಾಹಿಸಿ ಸಹಕರಿಸಬೇಕೆಂದು ಸಲಹೆ ನೀಡಿದ ಅವರು ತನ್ಮೂಲಕ ಪ್ರಕೃತಿ-ಪರಿಸರ ಸಂರಕ್ಷಣೆ ಮಾಡಿದಂತೆಯೂ ಆಗುತ್ತದೆ ಎಂದು ಹೇಳಿದರು.


ಜನಸೇವಾಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರು, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಧನಕೀರ್ತಿ ಆರಿಗಾ, ಸಂದೀಪ್ ರೈ, ರಾಘವೇಂದ್ರ ರಾಜ್, ಜೀವನ್ ಶೆಟ್ಟಿ ಅಯೋಧ್ಯಾ, ಶರತ್ ಶೆಟ್ಟಿ, ನಿಖಿಲ್ ನಾಯಕ್  ಮತ್ತು ಸಂದೀಪ್ ದೇವ್ ಉಪಸ್ಥಿತರಿದ್ದರು.

Related posts

ಪ್ರಬಂಧ ಸ್ಪರ್ಧೆ: ಕುಂಭ ಶ್ರೀ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿಗೆ ಬೆಸ್ಟ್ ಆ್ಯಂಡ್ ಮೋಸ್ಟ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ಕರ್ನಾಟಕ ಪ್ರಶಸ್ತಿ

Suddi Udaya

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವೈಭವ: ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ವಿವಿಧ ಸಮಿತಿಗಳ ಜೊತೆ ಸಮಾಲೋಚನಾ ಸಭೆ

Suddi Udaya

ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Suddi Udaya

ನಾರಾವಿ ವರ್ಗಾವಣೆಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

Suddi Udaya

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ

Suddi Udaya
error: Content is protected !!