September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಿನ್ನಿಗೋಳಿಯ ಐತಿಹಾಸಿಕ ಜಯದ ರೂವಾರಿ ಮಡಂತ್ಯಾರಿನ ಜೋಯೇಲ್ ಮೆಂಡೋನ್ಸಾ

ಬೆಳ್ತಂಗಡಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ 16ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಣೀಕ್ ಕಿನ್ನಿಗೋಳಿ ಅವರು ಭರ್ಜರಿ ಜಯ ಸಾಧಿಸುವಲ್ಲಿ ಮಡಂತ್ಯಾರು ಸಹಕಾರಿ ಸಂಘದ ಅಧ್ಯಕ್ಷ ಜೋಯೇಲ್ ಮೆಂಡೋನ್ಸ ವಿಶೇಷ ಪಾತ್ರ ವಹಿಸಿದ್ದಾರೆ.

ಅತೀ ಹೆಚ್ಚು ಕ್ರಿಶ್ಚಿಯನ್ ಮತದಾರರನ್ನು ಹೊಂದಿರುವ ಈ ವಾರ್ಡ್‌ನಲ್ಲಿ, ಜಾತಿ-ಧರ್ಮದ ಭೇದ ಮರೆತು ಜನತೆ ಶಾಸಕ ಜನ ಸೇವಕ ಉಮಾನಾಥ್ ಕೋಟ್ಯಾನ್ ರವರು ಮಾಡಿದ ಅಭಿವೃದ್ಧಿಗೆ ಮತ ನೀಡಿದ್ದಾರೆ. ಕ್ರಿಶ್ಚಿಯನ್ ಸಮುದಾಯವು ಬಿಜೆಪಿಯ “ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಮಂತ್ರ ಮತ್ತು ಪ್ರಧಾನಿ ಮೋದಿಯವರ ಅಭಿವೃದ್ಧಿ ಪರ ಚಿಂತನೆಗೆ ನೀಡಿದ ಸ್ಪಷ್ಟ ಜನಾದೇಶ ಇದಾಗಿದೆ.

ವಿಶೇಷವಾಗಿ ವಾರ್ಡ್ ನಂಬರ್ 16 ರಲ್ಲಿ ಸುಮಾರು 700ಕ್ಕಿಂತ ಅಧಿಕ ಕ್ರೈಸ್ತ ಮತದಾರರು ಮತ್ತು ಸುಮಾರು 300ಮಂದಿ ಹಿಂದೂ ಮತದಾರರು ಇರುವಂತಹ ವಾರ್ಡಿನಲ್ಲಿ ಕ್ರೈಸ್ತ ಸಮುದಾಯದ ವಿಶ್ವಾಸವನ್ನು ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ಸಂಘಟನಾ ಚತುರ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರು ಜಿಲ್ಲಾ ಪ್ರಭಾರಿ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ‌ ಅಧ್ಯಕ್ಷ ಜೋಯಲ್ ಮೆಂಡೋನ್ಸ ಅವರ ಚಮತ್ಕಾರ, ತಂತ್ರಗಾರಿಕೆಯಿಂದ ಜಯ ತರುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಕ್ರೈಸ್ತ ಸಮುದಾಯದವರು ಭಾರತೀಯ ಜನತಾ ಪಾರ್ಟಿಯ ಬೆಂಬಲಿಸುವಂತಹ ಮುನ್ಸೂಚನೆ ಕಿನ್ನಿಗೋಳಿಯ ಪಟ್ಟಣ ಪಂಚಾಯತ್ ಚುನಾವಣೆಯ ಮುಖಾಂತರ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಜೋಯಲ್ ಮೆಂಡೊನ್ಸರ್ ಅವರ ಈ ತಂತ್ರಗಾರಿಕೆ ರಾಷ್ಟ್ರ,ರಾಜ್ಯ ಮತ್ತು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಮುಖರಿಂದ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇವರ ತಂಡದಲ್ಲಿ ಮಂಡಲ ಪ್ರಭಾರಿಗಳಾದ ಗ್ಲೆನ್ ವಿಶಾಲ್ ಡಿಸಿಲ್ವಾ ಮೂಡುಬಿದಿರೆ, ಜೋಯ್ಸನ್ ಡಿಸೋಜಾ ನೀರುಡೆ, ಸ್ಟ್ಯಾನಿ ಪಿಂಟೋ, ರೂಬೆನ್ ಡಿಸೋಜಾ, ಸಚಿನ್ ರೋಜಾರಿಯೋ ,ಗ್ರಾಮ ಪಂಚಾಯತ್ ಸದಸ್ಯ ಅನಿತಾ ಡಿಕೋಸ್ಟ ಇವರ ಸಹಕಾರ ಮರೆಯುವಂತಿಲ್ಲ.

Related posts

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಂ ಜನ್ಮದಿನ ಆಚರಣೆ

Suddi Udaya

ಸಿ ಎಸ್ ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅದ್ವಿತೀಯ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಗೇರುಕಟ್ಚೆ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ

Suddi Udaya

ಅಳದಂಗಡಿ ಸ. ಪ್ರೌ. ಶಾಲೆಯ ಶಿಕ್ಷಕ ಜಗದೀಶ್ ಬಿ.ಎಸ್ ಹಾಗೂ ಗೌರವ ಶಿಕ್ಷಕಿ ಸಾಧನ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!