ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಸಂಘಗಳ ಉದ್ಘಾಟನೆ

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮುಂಡಾಜೆ ಶಿಕ್ಷಣ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ 2023- 24 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಜು.12 ರಂದು ನಡೆಯಿತು.

ಮುಂಡಾಜೆ ವಿವೇಕಾನಂದ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ್ ರಾವ್ ಕಲ್ಮಂಜ ಇವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ, ಗೌರವ ಇರಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಮತಿ ಇವರು ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.


ವಿವೇಕಾನಂದ ವಿದ್ಯಾವರ್ಧಕ ಸಂಘಗಳ ಆಡಳಿತಕ್ಕೆ ಒಳಪಟ್ಟ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯಚಂದ್ರ ಶ್ರೀಮಾನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳಿದರು ಹಾಗೆಯೇ ಇದೊಂದು ಸುವರ್ಣ ಅವಕಾಶ ಇದನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಮಾಡಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ ಎಂದು ಮಕ್ಕಳಿಗೆ ಹಿತನುಡಿಯನ್ನಾಡಿದರು.


ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಭವಿಷ್ಯ ರಾಣಿ (10)ನೇ ಉಪನಾಯಕನಾಗಿ ಜಸ್ವಿನ್ (9)ನೇ ಹಾಗೂ ಸಭಾಪತಿಯಾಗಿ ಕುಮಾರಿ ಮಾನ್ಯ (10)ನೇ ಆಯ್ಕೆಯಾದರು. ಸಹ ಶಿಕ್ಷಕಿ ಶ್ರೀಮತಿ ಸೌಭಾಗ್ಯರವರು ಸ್ವಾಗತಿಸಿ, ಶ್ರೀಮತಿ ಉಷಾ ಮೋಹನ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಸಹ ಶಿಕ್ಷಕಿ ಶ್ರೀಮತಿ ಸೌಮ್ಯ ವಂದಿಸಿದರು. ಎಲ್ಲಾ ಶಿಕ್ಷಕ -ಶಿಕ್ಷಕಿಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

Suddi Udaya

ಭಾರಿ ಸಿಡಿಲು ಮಳೆ: ಕೊಯ್ಯೂರು ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದ ಬೆಂಕಿ

Suddi Udaya

ಉಜಿರೆ ಎಸ್ ಡಿ ಯಂ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ

Suddi Udaya

ರೂ. 3ಕೋಟಿ ವೆಚ್ಚದಲ್ಲಿ ನಡ ಗ್ರಾಮದ ಪಡ್ಪು- ಕನ್ಯಾಡಿ- ಭೀಮಂಡೆ ಕಾಂಕ್ರೀಟಿಕರಣಗೊಳಿಸಿದ ರಸ್ತೆಯ ಉದ್ಘಾಟನೆ

Suddi Udaya

ಕೊಕ್ಕಡದಿಂದ ಮುಂಡೂರುಪಳಿಕೆವರೆಗೆ 3 ಫೇಸ್ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ ಬೆಳ್ತಂಗಡಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರಿಗೆ ಮನವಿ

Suddi Udaya
error: Content is protected !!