25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

ಬೆಳ್ತಂಗಡಿ: ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶಾಲೆಯ ಕಪಾಟಿ ನಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ಇಳಂತಿಲದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲಾ ಮುಖ್ಯೋಪಾಧ್ಯಾಯಿನಿ ಗುರುವಾರ ಬೆಳಿಗ್ಗೆ ಶಾಲೆಗೆ ಬಂದು ನೋಡಿದಾಗ ಶಾಲೆಯ ಕಛೇರಿ ಕೊಠಡಿಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿರುವುದು ಕಂಡು ಬಂದಿದೆ. ಒಳಗೆ ನೋಡಿದಾಗ ಕಪಾಟಿನ ಬೀಗ ಒಡೆದಿದ್ದು ಅದರಲ್ಲಿ ಇರಿಸಲಾಗಿದ್ದ ರೂ 1,500 ಹಣವನ್ನು ಕಳವು ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ತೋಟತ್ತಾಡಿ: ಬಾಬು ಗೌಡ ನೇಣುಬಿಗಿದು ಆತ್ಮಹತ್ಯೆ

Suddi Udaya

ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಖಂಡಿಗ ನಿವಾಸಿ ವಾಸಪ್ಪ ಗೌಡರಿಗೆ ಚಿಕಿತ್ಸಾ ನೆರವು

Suddi Udaya

ಮಕ್ಕಾದಲ್ಲಿ ನಿಧನ ಹೊಂದಿದ ಉಮ್ರಾ ಯಾರ್ತಾರ್ಥಿಯ ಅಂತ್ಯಸಂಸ್ಕಾರ‌ಕ್ಕೆ ನೇತೃತ್ವ ವಹಿಸಿದ ಕಿಲ್ಲೂರಿನ ಅಬ್ದುಲ್ ಅಝೀಝ್ ಝುಹುರಿ

Suddi Udaya

ಗ್ರಾ.ಪಂ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಬಗ್ಗೆ ಮಾರ್ಚ್ 1ರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಾರ್ವಜನಿಕ ಮಹತ್ವದ ವಿಚಾರದ ಬಗ್ಗೆ ವಿಧಾನಸಭೆ ಸಭಾಪತಿಯವರಿಗೆ ಪತ್ರ

Suddi Udaya

ತಣ್ಣೀರುಪಂತ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!