September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲ : ಪ್ರಶಿಕ್ಷಣ ವರ್ಗ – ಹಿಂದೂ ಸಂಗಮದ ಆಮಂತ್ರಣ ಪತ್ರ ಬಿಡುಗಡೆ

ಇಳಂತಿಲ: ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ ಮತ್ತು ಸಂಘಟಿತ ಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಿಂದೂ ಸಂಗಮ ಮಡಂತ್ಯಾರು ನಿರ್ವಹಣಾ ತಂಡದ ವತಿಯಿಂದ ಕರಾಯ ಮಂಡಲ ನಿರ್ವಹಣಾ ತಂಡದ ಪದಾಧಿಕಾರಿಗಳಿಗಾಗಿ ಪ್ರಶಿಕ್ಷಣ ವರ್ಗ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ.11 ರಂದು ವಾಣಿಶ್ರೀ ಭಜನಾ ಮಂದಿರ ವಾಣಿ ನಗರ ಇಳಂತಿಲ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮದ ಆಶಯ, ಪದಾಧಿಕಾರಿಗಳ ಜವಾಬ್ದಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಾಮಾಜಿಕ ಮುಂದಾಳು ಸುದರ್ಶನ್ ಕೊಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು.

ಪ್ರಶಿಕ್ಷಣ ವರ್ಗವನ್ನು ವಿಜಯ ಅರಳಿ , ಮತ್ತು ರವಿ ಇಳಂತಿಲ ನಡೆಸಿಕೊಟ್ಟರು. ಸಭೆಯಲ್ಲಿ ತಾಲೂಕು ಆಯೋಜನಾ ಸಮಿತಿಯ ಉಪಾಧ್ಯಕ್ಷ ಸುಬ್ರಮಣ್ಯ ಕುಮಾರ್ ಅಗರ್ತ, ಜೊತೆ ಕಾರ್ಯದರ್ಶಿ ಕರಾಯ ಮಂಡಲ ನಿರ್ವಹಣಾ ತಂಡದ ಸಂಯೋಜಕರಾದ ಜಗದೀಶ್ ಶೆಟ್ಟಿ ಮೈರಾ, ಊರಿನ ಗಣ್ಯರು ಹಾಗೂ ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರಾಯ, ಇಳಂತಿಲ ಮತ್ತು ಮೊಗ್ರು ಗ್ರಾಮಗಳಿಂದ ಸುಮಾರು 109 ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ನೆರಿಯ: ಕಡವೆ ಬೇಟೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಬಂದಾರು: ಮಾನಸಿಕ ಅಸ್ವಸ್ಥರಾದ ವೇದಾವತಿರವರನ್ನು ಗುಂಡೂರಿ ಸೇವಾಶ್ರಮಕ್ಕೆ ಸೇರ್ಪಡೆ

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ: ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘ ಮತ್ತು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸಿಪಿ ಆರ್ ಮಾಹಿತಿ ಮತ್ತು ತರಬೇತಿ ಕಾರ‍್ಯಕ್ರಮ

Suddi Udaya
error: Content is protected !!