ಬಳಂಜ: ಮಣ್ಣಿನ ಒಳಗೆ ಹೋಗಿದ್ದ ಪುರಾತನ ಕಾಲದ ನಾಗದೇವರ ವಿಗ್ರಹ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಪತ್ತೆಯಾಗಿದೆ.
ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಅವರು ತನ್ನ ಇಕೋ ಫಾರ್ಮ್ ನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದು ನಿರಂತರ ಕೃಷಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಜೆಸಿಬಿ ಮೂಲಕ ಮಣ್ಣು ಅಗೆಯುವ ಸಂದರ್ಭದಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಸಿಕ್ಕಿರುವುದರಿಂದ ಜನರಲ್ಲಿ ಭಯ,ಭಕ್ತಿಯ ವಾತಾವರಣ ಸೃಷ್ಟಿಯಾಗಿದೆ.
ಈ ನಾಗ ಕಲ್ಲುಗಳು ಸಿಕ್ಕಿದ ಪ್ರದೇಶಕ್ಕೆ ರಾಕೇಶ್ ಹೆಗ್ಡೆಯವರು ಜ್ಯೋತಿಷ್ಯರನ್ನು ಕರೆ ತಂದಾಗ ಈ ಕಲ್ಲುಗಳು ಸುಮಾರು 400 ವರ್ಷಗಳ ಹಿಂದಿನ ಕಾಲದವು ಎಂದು ತಿಳಿಸಿದರು.
ನಮ್ಮ ಇಕೋ ಫಾರ್ಮ್ ನಲ್ಲಿ ನಾಗಬನವಿರುವುದರಿಂದ ಬರುವ ಬುಧವಾರ ನಾಗದೇವರಿಗೆ ಪೂಜೆಗಳು ನಡೆಯಲಿದ್ದು ಇದೀಗ ಮಣ್ಣು ಅಗೆಯುವಾಗ ನಾಗ ಕಲ್ಲು ಸಿಕ್ಕಿರುವುದು ನಮಗೆ ಅಚ್ಚರಿ, ಭಯ, ಭಕ್ತಿ ಮೂಡಿಸಿದೆ ಎಂದು ರಾಕೇಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.