ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಮಹಿಳಾ ಒಕ್ಕೂಟ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಸಾಂತ್ವನ ಕೇಂದ್ರ, ಬೆಳ್ತಂಗಡಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ಬೆಳ್ತಂಗಡಿ ಮಹಿಳಾ ವೃಂದ ಬೆಳ್ತಂಗಡಿ, ಪ್ರಗತಿ ಮಹಿಳಾ ಮಂಡಲ ಉಜಿರೆ ಸ್ಪೂರ್ತಿ ಮಹಿಳಾ ಮಂಡಲ, ಮೇಲಂತಬೆಟ್ಟು, ವೈಭವಿ ಮಹಿಳಾ ಮಂಡಲ, ಕುವೆಟ್ಟು ಲೇಡಿ ಜೆ.ಸಿ., ಜೆ.ಸಿ.ಐ. ಬೆಳ್ತಂಗಡಿ ಮಂಜುಶ್ರೀ ಇವರ ಸಹಭಾಗಿತ್ವದೊಂದಿಗೆ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ವಾಹನ ಜಾಥಾ ಕಾರ್ಯಕ್ರಮ ಮಾ.12 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಸುವರ್ಣ ಆರ್ಕೇಡ್ ವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ನ್ಯಾಯಧೀಶ ವಿಜಯೇಂದ್ರ ಟಿ.ಎಚ್ ದೀಪ ಪ್ರಜ್ವಲಿಸಿ ಮಾತನಾಡಿ ಬೆಳ್ತಂಗಡಿ ಮಹಿಳಾ ಸಂಘಟನೆಗಳು ಕ್ರೀಯಾಶೀಲವಾದಂತಹ ಕೆಲಸ ಮಾಡುತ್ತ ಬಂದಿದೆ. ಪ್ರತಿನಿತ್ಯವೂ ಸಮಾಜದಲ್ಲಿ ಮಹಿಳೆಯರ ಸೇವೆ, ಕೊಡುಗೆ ಅಪಾರ. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಆ ನಿಟ್ಟಿನಲ್ಲಿ ಹಲವಾರು ಕಾಯ್ದೆಗಳು ಬಂದಿದೆ. ಮಹಿಳಾ ಸಂಘಟನೆಗಳು ಅರಿವು ಮೂಡಿಸುವ ಕಾರ್ಯಕ್ರಮಗಳು ಮಾಡುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸವಿತಾ ಜಯದೇವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ, ದಂತ ವೈದ್ಯೆ ಡಾ| ದೀಪಾಲಿ ಡೋಂಗ್ರೆ ಉಜಿರೆ, ಸುವರ್ಣ ಆರ್ಕೇಡ್ ಮಾಲಕ ನಾಣ್ಯಪ್ಪ ಪೂಜಾರಿ, ದ.ಕ. ಜಿಲ್ಲಾ ಮಹಿಳಾ ಮಂಡಲ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಚಂಚಲ ತೇಜೋಮಯ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಡಿರುದ್ಯಾವರ ವಿದ್ಯಾಸರಸ್ವತಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ಶಾಂತಾ ಬಂಗೇರ, ಬೆಳ್ತಂಗಡಿ ಮಹಿಳಾವೃಂದದ ಅಧ್ಯಕ್ಷೆ ಶ್ರೀಮತಿ ಆಶಾ ಸತೀಶ್, ಬೆಳ್ತಂಗಡಿ ಲೇಡಿ ಜೆ.ಸಿ., ಜೆ.ಸಿ.ಐ. ಮಂಜುಶ್ರೀ ಸಂಯೋಜಕರು ಶ್ರೀಮತಿ ಶ್ರುತಿ ರಂಜಿತ್, ಬೆಳ್ತಂಗಡಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ನಿಶಾ ಯಶವಂತ್, ಮೇಲಂತಬೆಟ್ಟು ಸ್ಪೂರ್ತಿ ಮಹಿಳಾಮಂಡಲದ ಅಧ್ಯಕ್ಷೆ ಶ್ರೀಮತಿ ಜೆಸಿಂತ ಮೋನೀಸ್, ಆಪ್ತ ಸಮಾಲೋಚಕರು ಶ್ರೀಮತಿ ಸೌಮ್ಯಶ್ರೀ ಉಪಸ್ಥಿತರಿದ್ದರು.
ಮಹಿಳಾ ಉದ್ಯಮಿ ಶ್ರೀಮತಿ ಅರ್ಚನ ಪೈ ಉಜಿರೆ, ತೋಟತ್ತಾಡಿ ಪೌರಕಾರ್ಮಿಕರು ಶ್ರೀಮತಿ ಶುಭಾ, ಹಾಗೂ ಅಕ್ಷ ಅಜಯ್ ಶೆಟ್ಟಿ ಉಜಿರೆ ಇವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಶಾಂತ ಬಂಗೇರ ಸ್ವಾಗತಿಸಿದರು.