ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಬೆಳೆ ಸಾಲ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲ:ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಆಗ್ರಹ

Suddi Udaya

ಬೆಳ್ತಂಗಡಿ: ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಬೆಳೆ ಸಾಲವನ್ನು ರೂ. 3 ಲಕ್ಷ ದಿಂದ 5 ಲಕ್ಷ ರೂ.ವರೆಗೆ ಏರಿಸಲಾಗಿದ್ದರೂ ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಈ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲವಾಗಿದೆ. ಇದಕ್ಕಾಗಿ ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಯೋಜನೆಯ ಬಗ್ಗೆ ಸೆ. 12 ರಂದು ಸಹಕಾರ ಇಲಾಖೆ ಮೂಲಕ ಆದೇಶ ಮಾಡಲಾಗಿದೆ. ಆದರೆ ಈ ಸಾಲ ನೀಡಲು ಅಗತ್ಯವಿರುವ ನಿಧಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ಹೆಚ್ಚಿಸಿರುವ ಸಾಲದ ಮೊತ್ತವನ್ನು ಸಹಕಾರ ಸಂಘಗಳು ಸ್ವಂತ ನಿಧಿಯಿಂದ ನೀಡಬೆಕಾಗಿದೆ. ಸಾವಿರಾರು ಸದಸ್ಯರಿಗೆ ಸ್ವಂತ ನಿಧಿಯಿಂದ ಸಾಲ ನೀಡಿದರೆ ಅದು ಸಹಕಾರ ಸಂಘಗಳ ವ್ಯವಹಾರದ ಮೇಲೆ ವ್ಯತರಿಕ್ತ ಪರಿಣಾಮ ಬೀರಲಿದೆ. ಈ ಕಾರಣದಿಂದ ಸಹಕಾರ ಸಂಘಗಳು ಹೆಚ್ಚಿನ ಸಾಲದ ಪ್ರಮಾಣದ ಮೊತ್ತವನ್ನು ರೈತರಿಗೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಸರಕಾರ ಯೋಜನೆ ಘೋಷಿಸಿದ್ದರೂ ಇದು ಜಿಲ್ಲೆಯ ಮಟ್ಟಿಗೆ ಫಲಾನುಭವಿಗಳನ್ನು ತಲುಪದ ಯೋಜನೆಯಾಗಿ ಮುಂದುವರಿದಿದೆ. ಹೀಗಾಗಿ ಇದಕ್ಕೆ ಬೇಕಾಗುವ ನಿಧಿಯನ್ನು ಕೂಡಲೆ ಬಿಡುಗಡೆಗೊಳಿಸಿ ರೈತರರಿಗೆ ನೆರವಾಗಬೇಕೆಂದು ಮಾ.7 ರಂದು ಅವರು ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Leave a Comment

error: Content is protected !!