September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿನ್ನಾಭರಣ ಪರೀಕ್ಷಕನ ವಜಾ ಪ್ರಕರಣ; ಪ್ರಕರಣದ ನಿಗೂಢತೆಯ ಬಯಲಿಗೆ ಆಗ್ರಹ; ಮಾ.18ರಂದು ಕೊಕ್ಕಡದಲ್ಲಿ ಪ್ರತಿಭಟನೆ

ಕೊಕ್ಕಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೊಕ್ಕಡದ ವೈದ್ಯ ಡಾ.ಗಣೇಶ್ ಪ್ರಸಾದ್ ತಿಳಿಸಿದ್ದಾರೆ.


ಮಾ.12ರಂದು ಕೊಕ್ಕಡದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಊರಿನಲ್ಲಿ ಪ್ರಾಮಾಣಿಕರಾಗಿ ಜನಮೆಚ್ಚುಗೆ ಪಡೆದಿದ್ದ ಚಿನ್ನಾಭರಣ ಪರೀಕ್ಷಕ (ಸರಾಫ) ರೊಬ್ಬರನ್ನು ಬ್ಯಾಂಕೊಂದರಿಂದ ವಜಾ ಮಾಡಲಾಗಿದೆ. ಕಾರಣ ಕೇಳಿದರೆ ನಕಲಿ ಚಿನ್ನಾಭರಣ ಪ್ರಕರಣದಲ್ಲಿ ಅವರು ತಪ್ಪೆಸಗಿದ್ದಾರೆ ಎಂಬ ಉತ್ತರ ಲಭಿಸುತ್ತಿದೆ. ಆದರೆ ನಕಲಿ ಚಿನ್ನಾಭರಣ ತಂದವರು ಯಾರು?, ಅವರು ಎಲ್ಲಿಯವರು? ಯಾವ ಆಧಾರದಲ್ಲಿ ಅವರಿಗೆ ಸಾಲ ನೀಡಲಾಯಿತು? ನಕಲಿ ಚಿನ್ನಾಭರಣವನ್ನು ತಂದು ವಂಚನೆ ಎಸಗಿದವರ ವಿರುದ್ದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆಯಾ? ಸಲ್ಲಿಸಲಾಗಿದ್ದರೆ ನಕಲಿ ಚಿನ್ನಾಭರಣವನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆಯಾ? ನಕಲಿ ಚಿನ್ನಾಭರಣವನ್ನು ತಂದಿರಿಸಿದವನ ಬಂಧನವಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಸಮರ್ಪಕ ಉತ್ತರ ನೀಡದೆ ಇರುವುದರಿಂದ ಪ್ರಕರಣದಲ್ಲಿ ಬಡಪಾಯಿ ಸರಫಾರನ್ನು ಬಲಿಪಶು ಮಾಡಲಾಗಿರುವ ಶಂಕೆ ಮೂಡಿದೆ ಎಂದು ಅವರು ಆರೋಪಿಸಿದರು.


ಇಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ದಾಖಲೀಕರಣವಿಲ್ಲ, ವಂಚಕನ ವಿರುದ್ಧ ಕಾನೂನು ಕ್ರಮವಿಲ್ಲ. ವಂಚನೆಗೆ ಕುಮ್ಮಕ್ಕು ನೀಡಿದವರ ಮೇಲೆ ಶಿಸ್ತು ಕ್ರಮವಿಲ್ಲ. ಆದಾಗ್ಯೂ ಸರಾಫರೊಬ್ಬರೇ ಅಪರಾಧಿ ಎಂದೆಣಿಸಿ ಕರ್ತವ್ಯದಿಂದ ವಜಾಗೊಳ್ಳುವ ನಿಗೂಢ ಪ್ರಕರಣದ ಸತ್ಯಾಸತ್ಯತೆ ಬಯಲುಗೊಳ್ಳಬೇಕೆಂದು ಅಗ್ರಹಿಸಿ ಎಂಟು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಕೊಕ್ಕಡದ ಕೆನರಾ ಬ್ಯಾಂಕ್ ಎದುರುಗಡೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ತುಕ್ರಪ್ಪ ಶೆಟ್ಟಿ ನೂಜೆ, ಉದ್ಯಮಿ ಇಸ್ಮಾಯಿಲ್, ಪ್ರಗತಿಪರ ಕೃಷಿಕ ಈಶ್ವರ ಭಟ್ ಹಿತ್ತಿಲು, ಗ್ರಾ.ಪಂ. ಮಾಜಿ ಸದಸ್ಯ ಶೀನಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Related posts

ಆ.25: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್‌ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಮಕ್ಕಳಿಗೆ ತಾಲೂಕು ಮಟ್ಟದ ಮುದ್ದುಕೃಷ್ಣ ,ಬಾಲಕೃಷ್ಣ, ಕೃಷ್ಣ ವೇಷ ಸ್ಪರ್ಧೆ, ಹೆಸರು ನೊಂದಾಯಿಸಲು ಕೊ.ದಿ. ಆ. 20-2024, ಮಾಹಿತಿಗಾಗಿ 8971689755 ಸಂಪರ್ಕಿಸಿರಿ

Suddi Udaya

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ್ರಮುಖರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನ ಮಹಿಳೆಯನ್ನು ನಿಂದಿಸಿ 50 ಸಾವಿರ ವಸೂಲಿ ಮಾಡಿದ ವಕೀಲೆ

Suddi Udaya

ಭವಿಷ್ಯದ ಶಿಕ್ಷಣದತ್ತ ಮತ್ತೊಂದು ದಿಟ್ಟ ಹೆಜ್ಜೆ – ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ AI & ರೋಬೋಟಿಕ್ಸ್ ತರಗತಿಗಳ ಆರಂಭ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ : ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರಿಂದ ಆಶೀರ್ವಾದ ಪಡೆದ ಡಿಕೆಶಿ

Suddi Udaya

ಮಲವಂತಿಗೆ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya
error: Content is protected !!