April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

ಉಜಿರೆ: ಗ್ರಾಮ ಪಂಚಾಯತ್ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ ಮಾ.14ರಂದು ಗ್ರಾಮ ಪಂಚಾಯತ್ ಪ್ರೇರಣಾ ಸಂಜೀವಿನಿ ಸಭಾಂಗಣದಲ್ಲಿ ಶ್ರೀಮತಿ ಉಷಾಕಿರಣ್ ಕಾರಂತ್ ಇವರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಾನಿಧ್ಯ ಕೌಶಲ್ಯ ತರಭೇತಿ ಕೇಂದ್ರದ ಭಿನ್ನ ಸಾಮರ್ಥಯ ಉಳ್ಳ ಮಕ್ಕಳ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಮುಂದಕ್ಕೆ ಶ್ರೀಮತಿ ಉಷಾಕಿರಣ್ ಕಾರಂತ್ ಸಭೆಯನ್ನು ಉದ್ಘಾಟಿಸಿದರು. ತದನಂತರಸ ಸಭೆಯನ್ನು ಉದ್ದೇಶಿಸಿ ಸ್ವಾಗತವನ್ನು ಶ್ರೀ ಶ್ರವಣ್ ಕುಮಾರ್ ಕಾರ್ಯದರ್ಶಿ,ಗ್ರಾಮ ಪಂಚಾಯತ್ ಉಜಿರೆ ಇವರು ನೆರವೇರಿಸಿ ಸಭೆಗೆ ಬಂದಂತಹ ಪ್ರತಿಯೊಬ್ಬರಿಗೂ ಸಾನಿಧ್ಯ ಕೌಶಲ್ಯ ತರಭೇತಿ ಕೇಂದ್ರದ ಭಿನ್ನ ಸಾಮರ್ಥಯ ಉಳ್ಳ ಮಕ್ಕಳು ತಯಾರಿಸಿರುವ ಹೂ ಗುಚ್ಛವನ್ನು ನೀಡಿ ಸವ್ವಾಗತಿಸಲಾಯಿತು.

ಸಭೆಯನ್ನು ಅತ್ಯಂತ ಜವಬ್ದಾರಿ ವಹಿಸಿ ಆಯೋಜನೆಯನ್ನು ಮಾಡಿರುವ ಶ್ರೀ ವಿಪುಲ್ ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತ ಗ್ರಾಮ ಪಂಚಾಯತ್ ಉಜಿರೆ ಇವರು ಕೂಡ ಸಭೇಯಲ್ಲಿ ಇದ್ದು ಪ್ರಸ್ತಾವನೆ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು.

ಸಭೆಯನ್ನು ಉದ್ದೇಶಿಸಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ರವಿ ಕುಮಾರ್ ಬರಮೇಲು ಮುಖ್ಯ ಅತಿಥಿಯಾಗಿ ಮಾತಾಡಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ನ ಗೌರವಾನ್ವಿತ ಸದ್ಯಸ್ಯರು ಈ ಸಭೆಯಲ್ಲಿ ಭಾಗಿಯಾಗಿ ಎಲ್ಲರಿಗೂ ಶುಭ ಹಾರೈಸಿದರು. ತದನಂತರ ಸರಕಾರದಿಂದ ವಿಶೇಷ ಚೇತನರಿಗೆ ಸಿಗುವ ಎಲ್ಲಾ ಯೋಜನೆ ಹಾಗೂ ಅದನ್ನು ಪಡೆಯುವ ಬಗ್ಗೆ ಸಭೆಯ ಕೇದ್ರ ಬಿಂದುವಾಗಿ ಸಂಪೂರ್ಣ ಮಾಹಿತಿಯನ್ನು ಶ್ರೀ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ತಾಲೂಕು ವಿಕಲಚೇತನರ ಮೇಲ್ವಿಚಾರಕರು MRW ತಾಲೂಕು ಪಂಚಾಯತ್ ಬೆಳ್ತಂಗಡಿ ಇವರು ನೀಡಿದರು. ಇದರ ನಂತರ ಉಜಿರೆ ಗ್ರಾಮ ವ್ಯಾಪ್ತಿಯ ಮೂರು ಜನ ವಿಶೇಷ ಚೇತನರಾದ ವಿಶ್ವನಾಥ ರೈ,ವನಿತಾ,ಅವಿನಾಶ್ ಇವರುಗಳಿಗೆ ವೈಧ್ಯಕೀಯ ಸಹಾಯಧನ ಗ್ರಾಮ ಪಂಚಾಯತ್ ಅಧ್ಯಕ್ಷರು ನೀಡಿದರು ಹಾಗೂ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಓರ್ವ ವಿಶೇಷ ಚೇತನ ವಿಧ್ಯಾರ್ಥಿನಿಯಾದ ಶಮ ಇವಳಿಗೆ ಸೊಲಾರ್ ಬಾಲ್ಭ್ ಅಳವಡಿಸುವ ಸೆಟ್ಟ್ ನ್ನು ಅಧ್ಯಕ್ಷರು ಹಸ್ತಾಂತರಿಸಿದರು.

ಶ್ರೀಮತಿ ಪ್ರತೀಮಾ ಇವರು ಶಿಕ್ಷಣ ಮತ್ತು ಸಾಕ್ಷರತಾ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಶ್ರೀಮತಿ ವಿನೀಷ ಇವರು NGNREGA ಯ ಅಡಿಯಲ್ಲಿ ವಿಶೇಷ ಚೇತನರಿಗೆ ಇರುವ ಅವಕಾಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಸಭೆಯಲ್ಲಿ ಶ್ರೀಮತಿ ಮಲ್ಲಕಾ ಮೇಲ್ವಿಚಾರಕರು ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ ಇವರು ಮುಖ್ಯ ಅಥಿತಿಯಾಗಿ ಬಾಗವಹಿಸಿ ವಿಶೇಷ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಹಾಗೂ ತಾಲೂಕಿನ ವಿವಿದ ಗ್ರಾಮ ಪಂಚಾಯತ್ ಗಳಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆಗಮಿಸಿ ಕಾರ್ಯ ಕ್ರಮವನ್ನು ಚಂದ ಕಾಣಿಸುವಲ್ಲಿ ಯಶಸ್ವಿಯಾದರು. ಹಾಗೇ ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದವರು ಕೂಡ ಈ ಗ್ರಾಮ ಸಭೆಯಲ್ಲಿ ಹಾಜರಿದ್ದರು. ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಹಾಗೆಯೆ ಆಶಾ, ಅಂಗನವಾಡಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತಿ ಇರುವುದಲ್ಲದೆ ವಿಶೇಷ ಚೇತನರ ಆರೋಗ್ಯ ದೃಷ್ಟಿಯಿಂದ ಒಟ್ಟು 37 ಜನ ವಿಶೇಷ ಚೇತನರ ಅರೋಗ್ಯ ತಪಾಸಣೆಯನ್ನು ವಿಶೇಷವಾಗಿ ಮಾಡಲಾಯಿತು.

ಈ ಸಂರ್ಭದಲ್ಲಿ ಶ್ರೀಮತಿ ಸುಜಾತಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಜಿರೆ ದಿನೇಶ್ ಸಮುದಾಯ ಆರೋಗ್ಯಾಧಿಕಾರಿ ಇವರು ಕೂಡ ಉಪಸ್ಥಿತಿ ಇದ್ದು ಸಭೆಯಲ್ಲಿ ಒಟ್ಟು 80 ಜನ ವಿಶೇಷ ಚೇತನರು ಹಾಜರಿದ್ದುಕೊಂಡು ಈ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಯಶಸ್ವಿಗೊಳಿಸಿದರು.

ಸಭೆಯ ನಿರೂಪಣೆಯನ್ನು ಕು/ತೇಜಸ್ವಿನಿ ಕೋಟ್ಯಾನ್ ಇವರು ನಡೆಸಿ ಸಭೆಯನ್ನು ಚಂದಕಾಣಿಸಿದರು ಮಾತ್ರವಲ್ಲ ಸಭೆಯಲ್ಲಿ SDM ಸ್ವಾಯುತ್ತ ಕಾಲೇಜಿನ ಸಮಾಜ ಶಾಸ್ತ ವಿಭಾಗದ ವಿಧ್ಯಾರ್ಥಿಗಳು ಕೂಡ ಉಪಸ್ಥಿತರಿದ್ದು ಸಹಕರಿಸಿದರು.

ಅಂತಿಮವಾಗಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷೀಯ ಬಾಷಣವನ್ನು ಶ್ರೀಮತಿ ಉಷಾಕಿರಣ್ ಕಾರಂತ್,ಅಧ್ಯಕ್ಷರು ಗ್ರಾಮ ಪಂಚಾಯತ್ ಉಜಿರೆ ಇವರು ನೆರೆವೇರಿಸಿ ಸಭೆಯನ್ನು ಕೊನೆಗೊಳಿಸುವ ಮುನ್ನ ಕಾರ್ಯಕ್ರಮದ ಧನ್ಯವಾದವನ್ನು ಶ್ರೀಮತಿ ಶಾಂತ LCRP ಪ್ರೇರಣ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಉಜಿರೆ ಇವರು ನೀಡಿದರು ಕೊನೆಗೆ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Related posts

ಕನ್ಯಾಡಿ I: ನೇರೊಳ್‌ಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ಕೊಕ್ಕಡ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ಉಜಿರೆ ಎಸ್ .ಡಿ .ಎಂ .ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಆಜ್ಞಾ- ಅರಿವಿನ ಧ್ಯಾನ ಕಾರ್ಯಕ್ರಮ ಸಂಪನ್ನ

Suddi Udaya

ಉಜಿರೆ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

Suddi Udaya
error: Content is protected !!