ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾಮ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ

ಬೆಳ್ತಂಗಡಿ : ಕಳಿಯ ಗ್ರಾಮದ 15ನೇ ಹಣಕಾಸು ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾ.14 ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಅಧ್ಯಕ್ಷತೆ ವಹಿಸಿದ್ದರು. ಕರಾಯ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಟಿ.ಬಿ.ಬಸವ ಲಿಂಗಪ್ಪ ಸಭೆಯನ್ನು ನಡೆಸಿಕೊಟ್ಟರು.

ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ,ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕಂಞ್ಞ ಕೆ, ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಮುಖ್ಯಸ್ಥರಾದ ಜಯಲಕ್ಷ್ಮಿ, ತಾಲೂಕು ಕಿರಿಯ ಅಭಿಯಂತರ ಗಫೂರು, ಚರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಕಾಮಗಾರಿ ಬಗ್ಗೆ ಲೆಕ್ಕ ಪರಿಶೋಧನೆ ಸಮಿತಿ ಸದಸ್ಯರಿಗೆ ಹಾಗೂ ಪಂಚಾಯತು ಸದಸ್ಯರು, ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತು ಸದಸ್ಯರಾದ ಮಜಲು,ಯಶೋಧರ ಶೆಟ್ಟಿ ಕೆ, ಅಬ್ದುಲ್ ಕರೀಂ ಕೆ.ಎಮ್, ಲತೀಫ್,ಸುಭಾಷಿಣಿ ಜನಾರ್ದನ ಗೌಡ ಕೆ, ಕುಸುಮ ಎನ್.ಬಂಗೇರ,ಮೋಹಿನಿ,ಮರೀಟಾ ಪಿಂಟೊ,ಪುಷ್ಪ ಹಾಗೂ ಗೇರುಕಟ್ಟೆ ಹಾಲು ಉ.ಸಂ.ಅಧ್ಯಕ್ಷ ಜನಾರ್ದನ ಗೌಡ ಕೆ,ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ,ಗುತ್ತಿಗೆದಾರ ನಿತೇಶ್, ಸ್ಥಳೀಯ ಗ್ರಾಮಸ್ಥರಾದ ರಾಘವ ಹೆಚ್,ಸತೀಶ್ ಭಂಡಾರಿ,ಹಿರಿಯರಾದ ಪೂವಪ್ಪ ಶೆಟ್ಟಿ, ಪಂಚಾಯತ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದರು.

Related posts

ಕರಿಮಣೇಲು: ಗಾಂಧಿನಗರ ನಿವಾಸಿ ಹಸನಬ್ಬ ನಿಧನ

Suddi Udaya

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ: ಕನ್ನಾಜೆಯ ಸುರಕ್ಷಾ ಆಚಾರ್ಯ ರಿಂದ ನೂಲಿನಲ್ಲಿ ತಯಾರಿಸಿದ ಹರೀಶ್ ಪೂಂಜರ ಚಿತ್ರ ಉಡುಗೊರೆ

Suddi Udaya

ಬಿ ಎಂ ಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿ ಯೋಜನೆ

Suddi Udaya

ಕುಕ್ಕಳ: ರಬ್ಬರ್ ಟ್ಯಾಪರ್ ನಾಪತ್ತೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು

Suddi Udaya

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿನ ಕುರಿತಾದ ಕಾರ್ಯಾಗಾರ

Suddi Udaya
error: Content is protected !!