April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇವುಗಳ ಸಹಭಾಗಿತ್ವದಲ್ಲಿ ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರ ದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿಖಿತಾ ಜೈಸನ್ ಸಮುದಾಯ ಆರೋಗ್ಯ ಅಧಿಕಾರಿ ಇವರು ಈ ಕಾರ್ಯಕ್ರಮದಲ್ಲಿ ಮಾರಕ ರೋಗ ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸಿ. ಅದನ್ನು ತಡೆಗಟ್ಟಬಹುದಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜೆ ಸಿ ಐ ಕೊಕ್ಕಡ ಕಪಿಲ ಘಟಕವು ಈ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಪ್ರಯುಕ್ತ ನಿವೃತ್ತ ಅಂಗನವಾಡಿ ಶಿಕ್ಷಕಿ ಪಿಟಿ ಎಲ್ಲಿಯಮ್ಮ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ನಿಕಿತಾ ಜೈಸನ್ ರವರನ್ನು ಘಟಕದ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷರಾದ ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್. ಕಾರ್ಯದರ್ಶಿ ಜೆ ಸಿ ಅಕ್ಷತ್ ರೈ, ನಿಕಟಪೂರ್ವ ಅಧ್ಯಕ್ಷರಾದ ಜೆ ಸಿ ಜಿತೇಶ್ ಎಲ್ ಪಿರೇರಾ, ಯೋಜನೆ ನಿರ್ದೇಶಕರಾದ ಜೆ ಸಿ ಪ್ರಿಯಾ ಜೆ ಅಮಿನ್, ಪೂರ್ವ ಅಧ್ಯಕ್ಷರಾದ ಜೆ ಸಿ ಜೆ ಎಫ್ ಎಂ ಕೆ. ಶ್ರೀಧರ್ ರಾವ್, ಘಟಕದ ಮಾರ್ಗದರ್ಶಕರಾದ ಜೆ ಸಿ ಎಚ್ ಜಿ ಎಫ್ ಜೋಸೆಫ್ ಪೀರೇರ, ಕೋಶಾಧಿಕಾರಿ ಜೆ ಸಿ ವಿದ್ಯೆಂದ್ರ ಎಸ್, ಬೆಲ್ಲಾರೆ ಜೆಸಿ ಘಟಕದ ಸದಸ್ಯರಾದ ಜೆಸಿ ಸೀತಾರಾಮ್ ರೈ, ಆಶಾ ಕಾರ್ಯಕರ್ತೆರಾದ ಶ್ರೀಮತಿ ಪುಷ್ಪ ಕೆ ಗುಂಡಿಗೆದ್ದೆ, ಶ್ರೀಮತಿ ರೇವತಿ ಬಟ್ಯಾಲ್, ಶ್ರೀ ಶಕ್ತಿ ಸಂಘದ ಸರ್ವ ಸದಸ್ಯರು ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಜೆಸಿ ವಾಣಿ ಯನ್ನು ಅನ್ಸಿಲ್ಲಾ ರೋಶ್ನಿ ರೋಡ್ರಿ ಗಸ್ ವಾಚಿಸಿದರು. ಜೆ ಸಿ ಎಚ್ ಜಿ ಎಫ್ ಸಂತೋಷ್ ಸ್ವಾಗತಿಸಿ. ಜೆಸಿ ಅಕ್ಷತ್ ರೈ ಕಾರ್ಯಕ್ರಮವನ್ನು ವಂದಿಸಿದರು.

Related posts

ಬೆಳ್ತಂಗಡಿ: ಅರುವ ಕೊರಗಪ್ಪ ಶೆಟ್ಟಿ ಅವರಿಗೆ “ಜಾನಪದ ಶ್ರೀ” ಪ್ರಶಸ್ತಿ

Suddi Udaya

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಏಟು: ಚಿಕಿತ್ಸೆ ಫಲಕಾರಿಯಾಗದೆ ಚಾರ್ಮಾಡಿ ಶಾಲಾ ಶಿಕ್ಷಕಿ ಸುಪ್ರಭಾ ಮೃತ್ಯು

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಆಶ್ರಯದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಹಾಗೂ ಸಮವಸ್ತ್ರ ವಿತರಣೆ

Suddi Udaya

ಕಣಿಯೂರು ಗ್ರಾ.ಪಂ. ಅಧ್ಯಕ್ಷರಾಗಿ ಯಶವಂತ, ಉಪಾಧ್ಯಕ್ಷರಾಗಿ ಜಾನಕಿ ಆಯ್ಕೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ’ಯಕ್ಷ ಶಿಕ್ಷಣ’ ಕಾರ್ಯಕ್ರಮದ ಉದ್ಘಾಟನೆ

Suddi Udaya

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ- ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿ ‘ತ್ರಿಪದಿ ಬ್ರಹ್ಮ, ಸಂತ ಕವಿ ಸವ೯ಜ್ಞ’ ಜಯಂತಿ ಆಚರಣೆ

Suddi Udaya
error: Content is protected !!