September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೇ 22: ಎಕ್ಸೆಲ್ ಅಕ್ಷರೋತ್ಸವ; ರಾಜ್ಯಮಟ್ಟದ ಕವಿಗೋಷ್ಠಿಗೆ ಆಹ್ವಾನ

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ‘ಅಕ್ಷರೋತ್ಸವ’ ಸಾಹಿತ್ಯ ಸಮ್ಮೇಳನ ಮೇ 22 ರಂದು ನಡೆಯಲಿದ್ದು, ಆಯ್ದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವ “ಕವನ ವಾಚನ ಗಾಯನ -ನೃತ್ಯ ಕುಂಚ ಕಾರ್‍ಯಕ್ರಮ ನಡೆಯಲಿದೆ.

ಆಯ್ಕೆಯಾದ ಕವಿಗಳಿಗೆ ಸ್ಮರಣಿಕೆ ಪ್ರಮಾಣಪತ್ರ ಗ್ರಂಥ ಗೌರವ ನೀಡುವುದರೊಂದಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಶಾಂತಿರಾಜ್ ಜೈನ್ ಕ್ಯಾಂಪಸ್ ಮೆನೇಜರ್ (9900626441), ಕನ್ನಡ ಉಪನ್ಯಾಸಕರಾದ ರಂಜಿತ್ (7204208355) ಹಾಗೂ ಮುನೀರ್ (7022559969) ಈ ನಂಬರಿಗೆ ಕರೆ ಮಾಡಿ ವಿಚಾರಿಸಬಹುದೆಂದು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಆಡಳಿತ ಮಂಡಳಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆ, ಕುವೆಟ್ಟು ಗ್ರಾಮ, .ಬೆಳ್ತಂಗಡಿ ದ.ಕ. -574217, ಇಲ್ಲವೇ ಇಮೇಲ್: [email protected] ವಿಳಾಸಕ್ಕೆ ಕವಿತೆಗಳನ್ನು ಕಳುಹಿಸಕೊಡಬಹುದು. ಕವರಿನ ಮೇಲೆ ಅಕ್ಷರೋತ್ಸವ-2024 ಎಂದು ಬರೆದು ಮೇ 10ರ ಒಳಗಾಗಿ ತಲುಪುವಂತೆ ತಮ್ಮ ಕವನಗಳನ್ನು ಈ ಮೇಲಿನ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

Related posts

ಉಜಿರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 376ನೇ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ದೀಪಾವಳಿ ಆಚರಣೆ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ನಾಗ ವಿ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Suddi Udaya

ಮಾಲಾಡಿಯಲ್ಲಿ ಮನೆ ಕಳ್ಳತಕ್ಕೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳನ ಸೆರೆ

Suddi Udaya

ಕೊಕ್ಕಡ ಗ್ರಾ.ಪಂ. ನಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಕಾಶಿಪಟ್ಣ ಗ್ರಾ.ಪಂ.ನಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

Suddi Udaya
error: Content is protected !!