April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಾರಿಗೆಬೈಲು ಸಮೀಪದಲ್ಲಿ ಚರಂಡಿಗೆ ಕಾರು ಪಲ್ಟಿ, ಚಾಲಕನ ಸ್ಥಿತಿ ಗಂಬೀರ

ನ್ಯಾಯತರ್ಪು : ಇಲ್ಲಿಯ ಜಾರಿಗೆಬೈಲು ಸಮೀಪದ ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುವ ಮೂಲಕ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಕ್ಕದ ಚರಂಡಿಗೆ ಬಿದ್ದು, ನಜ್ಜು-ಗುಜ್ಜಾದ ಘಟನೆ ಮಾ.15 ರಂದು ಸಂಜೆ ನಡೆಯಿತು.

ಕೆಎ.20 ಎಮ್.ಎ.2965 ಉಡುಪಿ ಮೂಲದ ಹೋಲ್ ಸೇಲ್ ಮತ್ತು ರಿಟೈಲರ್ ವ್ಯಾಪಾರದ ವ್ಯಕ್ತಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಓರ್ವ ಮಾತ್ರ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಾಲಕನಿಗೆ ಗಂಭೀರವಾದ ಗಾಯವಾಗಿದ್ದು ಸ್ಥಳೀಯರು 108 ಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ಚರಂಡಿಗೆ ಬಿದ್ದು 3 ಬಾರಿ ಪಲ್ಟಿ ಹೊಡೆದ ಕಾರು ರಸ್ತೆಯಿಂದ ಅಂದಾಜು 10 ಅಡಿ ಎತ್ತರಕ್ಕೆ ಜಿಗಿದು ಪಕ್ಕದ ಮನೆಯ ಅಂಗಳದಲ್ಲಿ ನಿಲ್ಲಿಸಿದಂತೆ ಕಾಣುವ ದೃಶ್ಯವನ್ನು ನೋಡಿದ ಮನೆಯವರು ಹೆದರಿ ದಂಗಾಗಿದ್ದಾರೆ. ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು,ವಾಹನಗಳ ಸಂಚಾರಕ್ಕೆ ಸಹಕರಿಸಿದರು.

Related posts

ತಾಲೂಕು ಮಟ್ಟದ ಕಂಠಪಾಠ ಸ್ಪರ್ಧೆ: ಕುಕ್ಕೇಡಿ ಬುಳೆಕ್ಕರ ಶಾಲೆಯ ವಿದ್ಯಾರ್ಥಿ ಪ್ರಥ್ವಿ ವಿ ಎಸ್ ಪ್ರಥಮ ಸ್ಥಾನ

Suddi Udaya

ಸೆ.28 : ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

Suddi Udaya

ನ.30: ಕರಾಯದಲ್ಲಿ ವಿದ್ಯುತ್ ನಿಲುಗಡೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ಚುನಾವಣೆ

Suddi Udaya

ಹೊಸಂಗಡಿ: ಮೀಟರ್ ಅಲಸಂದೆ ಅರ್ಕ ಮಂಗಳ ತಳಿಯ ಬಗ್ಗೆ ತರಬೇತಿ ಕಾರ್ಯಕ್ರಮ

Suddi Udaya

ರಾಜ್ಯ ಪುರಸ್ಕಾರ ಪರೀಕ್ಷೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ