ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ: ಮಕ್ಕಳಿಗೆ ಜೀವನ ಶಿಕ್ಷಣ ನೀಡಿ – ಸಂಸ್ಕಾರ ಕಲಿಸುವಲ್ಲಿ ಮಹಿಳೆಯ ಪಾತ್ರವೂ ಪುರುಷರಷ್ಟೇ ಪ್ರಧಾನವಾಗಿದೆ. ಮಹಿಳೆ ತನ್ನ ಬದುಕಿನಲ್ಲಿ ಸರ್ವಸ್ವವನ್ನು ತನ್ನ ಕುಟುಂಬ ಹಾಗೂ ಸಮಾಜದ ಏಳಿಗೆಗಾಗಿ ಸಮರ್ಪಿಸಿಕೊಂಡಿರುತ್ತಾಳೆ. ಅಂತಹ ಮಹಾನ್ ಚೇತನ ಈ ಸಮಾಜದ ಮಹಿಳೆ ಎನ್ನುವುದು ನಾವೆಲ್ಲ ಅರಿತುಕೊಳ್ಳಬೇಕಾಗಿದೆ. ಆ ದಿನವನ್ನು ಅರಿತುಕೊಂಡು ಇಡೀ ವಿಶ್ವದಲ್ಲಿ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮ್ಮ ಮಹಿಳಾ ಸಮಾಜಕ್ಕೆ ಮಹಾನ್ ಶಕ್ತಿ ಬಂದಂತೆ ಆಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೊಫೆಸರ್ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ ರವರು ಮಾತನಾಡಿದರು.


ಅವರು ಬೆಳ್ತಂಗಡಿಯ ಶಾಂತಿಶ್ರೀ ವತಿಯಿಂದ ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಸಭಾಭವನದಲ್ಲಿ ಉದ್ದೇಶಿಸಿ ಮಾತನಾಡಿದರು. ಮಹಿಳಾ ದಿನಾಚರಣೆಯ ಉದ್ದೇಶ ಹಾಗೂ ಮಹಿಳೆಯರ ಸ್ಥಾನಮಾನದ ಬಗ್ಗೆ ತಿಳಿ ಹೇಳಿದರು.
ಆಧುನಿಕ ಸಮಾಜಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮನವರ ಹಾಗೂ ಶ್ರೀಮತಿ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಅವರು ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿದ್ದುಕೊಂಡು ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ.


ಸಂಘದ ಸರ್ವ ಸದಸ್ಯರಿಗೆ ಮನೋರಂಜನ ಆಟಗಳನ್ನು ಏರ್ಪಡಿಸಿ, ಕಾರ್ಯಕ್ರಮವನ್ನು ಭಗವಂತನ ಚಿಂತನೆಯೊಂದಿಗೆ ಆರಂಭಿಸಿ, ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುವ ಸದಸ್ಯರನ್ನು ಅಭಿನಂದಿಸುವುದರೊಂದಿಗೆ , ಸ್ಪರ್ಧಾ ವಿಜೇತರಿಗೆ ಸಂಘದ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಎಸ್.ಹೆಗ್ಡೆ ಬಹುಮಾನ ವಿತರಿಸಿದರು.

ಶ್ರೀಮತಿ ದವಳ ಕಾರ್ಯಕ್ರಮ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Leave a Comment

error: Content is protected !!