September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.30: ಉಪ್ಪಾರಪಳಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ

ಕೊಕ್ಕಡ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಉಪ್ಪಾರಪಳಿಕೆ, ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಉಪ್ಪಾರಪಳಿಕೆಯಲ್ಲಿ ನವೀಕೃತ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮವು ಎ. 30 ರಂದು ನಡೆಯಲಿದೆ.


ಬೆಳಿಗ್ಗೆ ಗಂಟೆ 7.೦೦ಕ್ಕೆ ಗಣಹೋಮ, ೮ಕ್ಕೆ ನವೀಕೃತ ಭಜನಾ ಮಂದಿರದ ಪ್ರಾರಂಭೋತ್ಸವ, ಬಳಿಕ ಸಾಮೂಹಿಕ ಹನುಮಾನ್ ಚಾಲಿಸ್ ಪಠಣ, ೧೦.೩೦ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ, ಸಂಜೆ ಗಂಟೆ 4 ರಿಂದ ಆಹ್ವಾನಿತ ಭಜನಾ ತಂಡಗಳಿAದ ಕುಣಿತ ಭಜನೋತ್ಸವ, ೭ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.


ರಾತ್ರಿ ಗಂಟೆ ೯:೩೦ ರಿಂದ ಚಿದಾನಂದ ಅದ್ಯಪಾಡಿ ನಿರ್ದೇಶನದ ವಿಧಾತ್ರೀ ಕಲಾವಿದೆರ್ ಕೈಕಂಬ ಕುಡ್ಲ (ರಿ) ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಲಹೆ ಸಹಕಾರದೊಂದಿಗೆ ವಿಭಿನ್ನ ಶೈಲಿಯಲ್ಲಿ ‘ದೈವರಾಜೆ ಶ್ರೀ ಬಬ್ಬು ಸ್ವಾಮಿ’ ಭಕ್ತಿಪ್ರದಾನ ತುಳು ನಾಟಕ ನಡೆಯಲಿದೆ.

Related posts

ವೀಲ್‌ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗೆ ಆಸರೆಯಾದ ಧರ್ಮಸ್ಥಳ ಸಿ.ಎ ಬ್ಯಾಂಕ್

Suddi Udaya

ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಈದ್-ಉಲ್-ಫಿತರ್ ಆಚರಣೆ

Suddi Udaya

ಗಲ್ಫ್ ನ ಓಮಾನ್ ದೇಶದಲ್ಲಿ, ಗುರುವಾಯನಕೆರೆಯ “ಹೋಟೆಲ್ ರೆಯ್ಸ್ ಇನ್” ಮಾಲಕ ವಿಜಯ್ ಮತ್ತು ಜೇನ್ ಡಿಕುನ್ಹಾ ದಂಪತಿಗಳ “ದಬಕ್ ದಬಾ” ಕಲಾವಿದರ ಹುಮ್ಮಸಿನ ಪ್ರದರ್ಶನ ಹಾಗೂ ಜಯಭೇರಿ

Suddi Udaya

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಭಾರೀ ಮಳೆಗೆ ತುಂಬಿ ಹರಿದ ಅಂಬಡೆಬೆಟ್ಟು ಸೇತುವೆ ನದಿ

Suddi Udaya
error: Content is protected !!