39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ: ರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ

ಪೆರಿಂಜೆ: ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.14 ರಿಂದ ಮಾ.19ರವರೆಗೆ ನಡೆಯಿತು.

ಮಾ.17 ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮಾ.18 ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಡ್ಯೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು., ಮಾ.19 ರಂದು ರಾತ್ರಿ ಗಂಟೆ 7.30 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ

ಈ ಸಂದರ್ಭದಲ್ಲಿ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರು ಎ. ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿಯವರು ಪಡ್ಡ್ಯೋಡಿಗುತ್ತು, ವಿಕಾಸ್ ಜೈನ್, ವಿಶ್ವಾಸ್ ಜೈನ್, ಮತ್ತು ಮನೆಯವರು, ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಿಡ್ಲೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಕರಪತ್ರದಲ್ಲಿ ಯಕ್ಷಗಾನ ವೇಷಧಾರಿಯ ಫೋಟೋ ಬಳಕೆ: ಜಿಲ್ಲಾ ಚುನಾವಣಾಧಿಕಾರಿಗೆ ದೂರು ದಾಖಲು

Suddi Udaya

ಲಾಯಿಲ ಗ್ರಾ.ಪಂ. ನಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ

Suddi Udaya

ಮಡಂತ್ಯಾರು: ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀರಾಮ ಮಕ್ಕಳ ಪೋಟೋ ಸ್ಪರ್ಧೆ: ಸ್ಮಯ ಎಸ್ ಕೋಟ್ಯಾನ್ ಬಳಂಜರವರಿಗೆ ಪ್ರಥಮ ಪ್ರಶಸ್ತಿ

Suddi Udaya

ಮಡಂತ್ಯಾರು: ವಸಂತ ಶೆಟ್ಟಿ ನಿಧನ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಆಶ್ರಯದಲ್ಲಿ 21ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಆಟೋಟ ಸ್ಪರ್ಧೆ

Suddi Udaya
error: Content is protected !!