September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಮತ್ತು ಕಲ್ಮಂಜದಲ್ಲಿ ಸಂಪರ್ಕ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಪೂರೈಸಿದ ಶಾಸಕ ಹರೀಶ್ ಪೂಂಜ

ಧರ್ಮಸ್ಥಳ-ಮುಂಡಾಜೆ-ದಿಡುಪೆ ರಾಜ್ಯ ಹೆದ್ದಾರಿ 276ರ ಕಲ್ಮಂಜ ಗ್ರಾಮದ ಕೊತ್ತಲಿಗೆ, ವಂಜರೆಬೈಲ್ ಮತ್ತು ಪಿಲತಡ್ಕ ಭಾಗಗಳಲ್ಲಿನ ಹಳೆಯ ಸೇತುವೆಗಳು ಕಿರಿದಾಗಿದ್ದು, ಕುಸಿತಕೊಳಗಾಗಿ ನಾದುರಸ್ತಿಯಲ್ಲಿದ್ದು ಅಪಾಯದ ಮಟ್ಟವನ್ನು ಮೀರಿತ್ತು ಇದರಿಂದಾಗಿ ದಿನನಿತ್ಯ ವಾಹನ ಸವಾರರ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀರಾ ಅಡಚಣೆಯಾಗುತ್ತಿರುವುದನ್ನು ಆ ಭಾಗದ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ತತ್ಪರಿಣಾಮವಾಗಿ ಪ್ರಮುಖ ಜಿಲ್ಲಾ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಲೆಕ್ಕ ಶೀರ್ಷಿಕೆಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಶಾಸಕರು ವಿಶೇಷವಾಗಿ ಶ್ರಮವಹಿಸಿದರು .

ಸಾರ್ವಜನಿಕರ ಬಹುಕಾಲದ ಬೇಡಿಕೆಯ ತೀರಾ ಅಗತ್ಯತೆಯ ಸೇತುವೆಗಳ ಪುನರ್ ನಿರ್ಮಾಣ ಮಾಡುವ ಕಾರ್ಯವು ಈಗಾಗಲೇ ಕಾರ್ಯರಂಭಗೊಂಡಿದ್ದು ರೂ.3 ಕೋಟಿ 75ಲಕ್ಷವೆಚ್ಚದಲ್ಲಿ 3 ಭಾಗಗಳಲ್ಲಿ ನೂತನ ಸೇತುವೆಗಳು ನಿರ್ಮಾಣಗೊಳ್ಳಲಿದೆ. ಕಾಮಗಾರಿಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜಾರವರಿಗೆ ಮುಂಡಾಜೆ ಮತ್ತು ಕಲ್ಮಂಜ ಗ್ರಾಮದ ಉಭಯ ಗ್ರಾಮಸ್ಥರುಗಳು ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Related posts

ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಪದ್ಮಲತಾ ಮೋಹನ್ ನಿಡ್ಲೆ ಅವರ ಕಾದಂಬರಿ ‘ಮೃತ್ಯು ಚುಂಬನ’ ಕೃತಿ ಬಿಡುಗಡೆ

Suddi Udaya

ಬಜಿಲ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಜಾಗೃತಿ ಮಾಹಿತಿ ಕಾರ್ಯಾಗಾರ

Suddi Udaya

ಬಂದಾರು – ಮೊಗ್ರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳಿಂದ ಸ್ವಚ್ಚತಾ ಕಾರ್ಯ

Suddi Udaya

ಜು.8: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರಿಗೆ ದೃಢಕಲಶಾಭಿಷೇಕ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ “ಹೆಜ್ಜೆಗೊಂದು ಸ್ಫೂರ್ತಿ” ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya
error: Content is protected !!