ಮಡಂತ್ಯಾರು: ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮಡಂತ್ಯಾರು, ಗ್ರಾಮ ಪಂಚಾಯತ್ ಮಾಲಾಡಿ ಇದರ ಸಹಕಾರದೊಂದಿಗೆ ಹೆದ್ದಾರಿ ರಸ್ತೆ ಕಾಮಗಾರಿಯ ಅವ್ಯವಸ್ಥೆಯನ್ನು ಕುರಿತು ಹೆದ್ದಾರಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯು ಮಾ.18ರಂದು ವಿಶ್ವಕರ್ಮ ಸಭಾಭವನ ಬಸವನಗುಡಿ ಪುಂಜಾಲಕಟ್ಟೆಯಲ್ಲಿ ನಡೆಯಿತು.
ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ವರ್ತಕ ಬಂಧುಗಳು, ಸಾರ್ವಜನಿಕ ಬಂಧುಗಳು ಈ ಸಭೆಯಲ್ಲಿ ಭಾಗವಹಿಸಿ ಬೇಡಿಕೆ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
ಸಾರ್ವಜನಿಕರ ಅಹವಾಲುಗಳಿಗೆ ಸಂಬಂಧ ಪಟ್ಟವರಿಂದ ಸೂಕ್ತ ಪರಿಹಾರಗಳನ್ನು ಪಡೆದುಕೊಳ್ಳಲು ಹೆದ್ದಾರಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ ತಯಾರಿಸಲಾಯಿತು .
ಈ ಸಂದರ್ಭದಲ್ಲಿ ಪ್ರತ್ಯೇಕ ಹೋರಾಟ ಸಮಿತಿ ರಚಿಸಬೇಕೆಂದು.ಸಭೆಯಲ್ಲಿ ಪ್ರಸ್ತಾವನೆವಾಯಿತು. ಬೇಡಿಕೆಗಳು ಬಸವನಗುಡಿ ಪುಂಜಾಲಕಟ್ಟೆ ಮ ಇನ್ನಿತರ ಕಡೆಗಳಲ್ಲಿ ಕಾಂಕ್ರೀಟ್ ಚರಂಡಿ ಅಗತ್ಯವಿಲ್ಲ. ಚರಂಡಿ ತೆರವುಗೊಳಿಸಬೇಕು ಕಟ್ಟಡ ಮತ್ತು ಮನೆಗೆ ಹೋಗುವ ದಾರಿ ಅಗಲ ಮಾಡಬೇಕು, ಕಡಿದ ಮರಗಳನ್ನು ಶೀಘ್ರ ತೆರವುಗೊಳಿಸಬೇಕು, ಪರಿಹಾರ ನೀಡುವ ಆಫೀಸನ್ನು ಬೆಳ್ತಂಗಡಿಯಲ್ಲಿ ಮಾಡಬೇಕು, ಮಾಡಿದ ಕಾಮಗಾರಿಗೆ ಸರಿಯಾಗಿ ನೀರನ್ನು ಹಾಕಬೇಕು, ಧೂಳಿಗೆ 3ಸಲ ನೀರು ಹಾಕಬೇಕು ಹೆಚ್ಚು ಪ್ರಚಾರವಿರುವ ಪತ್ರಿಕೆಯಲ್ಲಿ ಪ್ರಚಾರ ಮಾಡಬೇಕು, ಚರಂಡಿ ಕೆಲಸವನ್ನು ಆದಷ್ಟು ಬೇಗ ಮಾಡಬೇಕು, ಸರ್ವೆ ನಂಬರನ್ನು ಸರಿಯಾಗಿ ಪ್ರಚಾರ ಮಾಡಬೇಕು, ಮಡಂತ್ಯಾರು ಪೇಟೆಯಲ್ಲಿ ಕಾಂಕ್ರೀಟ್ ಚರಂಡಿಗಳನ್ನು ಮಾಡಬಾರದು, ಎಲ್ಲಾ ಕಾಮಗಾರಿಯ ಬಗ್ಗೆ ಸರಿಯಾಗಿ ಮಾಹಿತಿಯನ್ನು ನೀಡಬೇಕು, ರಸ್ತೆ ಎತ್ತರವನ್ನು ಚರಂಡಿಗೆ ಸಮಾನವಾಗಿ ಮಾಡಬೇಕು, ವಿದ್ಯುತ್ ಕಂಬ ತೆರವು, ಪಟ್ಟಾ ಜಾಗದ ಮಾಹಿತಿ ಸಮರ್ಪಕ ವಾಗಿ ನೀಡಬೇಕು ಎಂದು ಸಭೆಯಲ್ಲಿ ಬೇಡಿಕೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಮಾಲಾಡಿ ಗ್ರಾಮದ ಅಧ್ಯಕ್ಷ ಪುನೀತ್ ಕುಮಾರ್. , ಮಡಂತ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪ ಎ.ಮ್, ಹೆದ್ದಾರಿ ರಸ್ತೆಯ ಇಂಜಿನಿಯರ್ ಗಳಾದ ನಾಗರಾಜ್ ಮತ್ತು ಕೀರ್ತಿರಾಜ್, ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಪದಾಧಿಕಾರಿಗಳು ಮತ್ತು ಸದಸ್ಯರು. ಕಟ್ಟಡದ ಮಾಲಕರು, ಉದ್ದಿಮೆಗಾರರು, ಪಂಚಾಯತ್ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು . ಕಾರ್ಯದರ್ಶಿ ತುಳಸಿದಾಸ್ ಸ್ವಾಗತಿಸಿಧನ್ಯವಾದವಿತರು