September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ ಫ್ರೌಡ ಶಾಲಾ ಹಿಂಬದಿ ಟವರ್ ಬುಡದಲ್ಲಿ ಬೆಂಕಿ ಜ್ವಾಲೆ: ದೊಡ್ಡ ಅನಾಹುತ ತಪ್ಪಿಸಿದ ಸ್ಥಳೀಯ ಯುವಕರ ತಂಡ

ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಸರಕಾರಿ ಫ್ರೌಡ ಶಾಲಾ ಸಮೀಪ ವಿದ್ಯುತ್ ಅವಘಡ ಸಂಭವಿಸಿ ಪಕ್ಕದ ರಬ್ಬರ್ ತೋಟಕ್ಕೆ ಮತ್ತು ಏರ್ಟೆಲ್ ಕಂಪನಿಯ ಮೊಬೈಲ್ ಟವರ್ ಬುಡದಲ್ಲಿ ಬೆಂಕಿ ತಗುಲಿದ ಘಟನೆ ಮಾ.18 ರಂದು ಸಂಜೆ ನಡೆಯಿತು.

ವಿಷಯ ತಿಳಿದು ತಕ್ಷಣ ಸ್ಥಳೀಯ ಯುವಕರಾದ ಹಮೀದ್ ಜಿ.ಡಿ,ಪ್ರಕಾಶ್ ಪೂಜಾರಿ ಮೆರ್ಲ,ಸೈಪುಲ್ಲ ಹೆಚ್,ಎಸ್,ಮತ್ತು ಸ್ಥಳೀಯರ ಮುತುವರ್ಜಿಯಿಂದ ಬೆಂಕಿ ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ತಕ್ಷಣ ಸ್ಥಳೀಯರು ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಅದೇ ಸಮಯದಲ್ಲಿ ತಾಲ್ಲೂಕಿನ ಬೇರೆ ಕಡೆಯಲ್ಲಿ ಬೆಂಕಿ ನಂದಿಸುನ ಕೆಲಸದಲ್ಲಿ ನಿರತರಾಗಿರುವುದರಿಂದ ಗೇರುಕಟ್ಟೆಗೆ ಬರಲು ಸಾಧ್ಯವಾಗಿಲ್ಲವೆಂದು ತಿಳಿದು ಬಂದಿದೆ. ಖಾಸಗಿ ಕಂಪನಿ ಮೊಬೈಲ್ ಟವರ್ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಪಾರ್ಮ್‌ನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಜ್ವಾಲೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮೊಬೈಲ್ ಟವರ್‌ನ ಕೆಳಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಿದೆ.

Related posts

ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆ: ಶಿಹಾನ್ ಅಬ್ದುಲ್ ರೆಹಮಾನ್ ರವರ ನೇತೃತ್ವದ ಉಜಿರೆ ಹಾಗೂ ಬೆಳ್ತಂಗಡಿ ಕರಾಟೆ ತರಬೇತಿ ಕೇಂದ್ರದ ಮಕ್ಕಳಿಗೆ ಹಲವು ಪ್ರಶಸ್ತಿ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್‌ಗೆ ಸನ್ಮಾನ

Suddi Udaya

ಅಳದಂಗಡಿಯ ವಿದುಷಿ ವಿದ್ಯಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರರವರಿಂದ ಮತದಾನ

Suddi Udaya

ಎ.15-16: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ಸಂದೇಶ: ವಸಂತ ಗಿಳಿಯಾ‌ರ್ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!