September 6, 2026
Uncategorized

ಮಂಜ್ಜೊಟ್ಟಿ ಹೋಲಿ ಕ್ರಾಸ್ ಚರ್ಚ್ ನಲ್ಲಿ “ಲಾವ್ದಾತೊ ಸಿ ಭಾನುವಾರ -2025”- ಪರಿಸರ ದಿನಾಚರಣೆ

ಮಂಜ್ಜೊಟ್ಟಿ: ಹೋಲಿ ಕ್ರಾಸ್ ಚರ್ಚ್, ಮಂಜ್ಜೊಟ್ಟಿಯಲ್ಲಿ ಇಂದು ( ಜುಲೈ 7) ಬೆಳಿಗ್ಗೆ 10 ಗಂಟೆಗೆ ಸರಿಯಾಗಿ “ಲಾವ್ದಾತೊ ಸಿ ಭಾನುವಾರ -2025”– ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳು ವಂದನೀಯ ಫಾ| ಪಾವ್ಲ್ ಸೆಬಾಸ್ಟಿಯನ್ ಡಿಸೋಜರವರು ವಹಿಸಿ, ಸಾಂಕೇತಿಕ ರೀತಿಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ಪ್ರತಿಯೊಬ್ಬರು ಪ್ರಕೃತಿ- ಸಂಮೃದ್ದಿಯ ಕಡೆಗೆ ತಮ್ಮ ಕೊಡುಗೆಯನ್ನು ನೀಡಬೆಕೇಂದು ಕರೆ ನೀಡಿದರು.”

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಮಾರ್ಕ್ ಡಿಸೋಜ, ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಐರಿನ್ ಸಿಕ್ವೇರಾ, 21 ಆಯೋಗದ ಸಂಯೋಜಕರಾದ ವಿನೋದ್ ಪಿಂಟೊ, ಪರಿಸರ ಆಯೋಗದ ಸಂಚಲಕರಾದ ಲ್ಯಾನ್ಸಿ ಲೋಬೊ, ಕಥೊಲಿಕ್ ಸಭಾ ಅಧ್ಯಕ್ಷರಾದ ಕ್ಲೇವಿನ್ ಮಿರಾಂದಾ ಮತ್ತು ಐಸಿವೈಮ್ ಸಂಘಟನೆಯ ಸದಸ್ಯರು ಹಾಜರಿದ್ದು ಎಲ್ಲರ ಸಹಯೋಗದೊಂದಿಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.

ಈ ದಿನದ ಪ್ರಮುಖ ಭಾಗವಾಗಿ “ಮನೆಗೊಂದು ಗಿಡ, ಕುಟುಂಬಕೊಂದು ಮರ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರತೀ ಕುಟುಂಬಕೊಂದು ಹಲಸು, ಹೆಬ್ಬಲಸು, ನೇರಳೆ, ಪುನರ್ಪಳಿ ಮತ್ತು ರಂಬುಟನ್ ಹೀಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. .

Related posts

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೇಟಿ

Suddi Udaya

ವೇಣೂರು: ಮಸೀದಿ ಆಡಳಿತ ಸಮಿತಿ ಹಾಗೂ ಸಮುದಾಯದ ಮುಖಂಡರುಗಳ ಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಪಪೂ ಕಾಲೇಜಿನಲ್ಲಿ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ಕೂಪನ್ ಬಿಡುಗಡೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya

ಶಿರ್ಲಾಲು ಕೆಮ್ಮಡೆ ನಿವಾಸಿ ಶ್ರೀಮತಿ ವಾರಿಜ ನಿಧನ

Suddi Udaya
error: Content is protected !!